alex Certify ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತಾನು ಒಂದೇ ಬಾರಿಗೆ ಬರೋಬ್ಬರಿ 10 ಕಂದಮ್ಮಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಒಂದು ವೇಳೆ ಈಕೆ ನೀಡಿರುವ ಹೇಳಿಕೆ ನಿಜವೆಂದು ಸಾಬೀತಾದಲ್ಲಿ ಈ ಮಹಾತಾಯಿಯ ಹೆಸರು ವಿಶ್ವ ದಾಖಲೆಯ ಪಟ್ಟಿಯಲ್ಲಿ ನಮೂದಾಗಲಿದೆ.

ಸದ್ಯ ಅತೀ ಹೆಚ್ಚು ಮಕ್ಕಳಿಗೆ ಒಂದೇ ಬಾರಿಗೆ ಜನ್ಮ ನೀಡಿರುವವರ ಪಟ್ಟಿಯಲ್ಲಿ ಪಶ್ಚಿಮ ಆಫ್ರಿಕಾದ ಮಾಲಿಯ ಹಲೀಮಾ ಸಿಸ್ಸೆ ಎಂಬವರ ಹೆಸರಿದೆ. ಇವರು ಮೇ ತಿಂಗಳಲ್ಲಿ ಮೊರೊಕ್ಕೋ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ್ದರು.

9 ಮಕ್ಕಳಿಗೆ ಜನ್ಮ ನೀಡಿ ಹಲೀಮಾ ಗಿನ್ನೆಸ್​ ವಿಶ್ವ ದಾಖಲೆಯನ್ನ ನಿರ್ಮಿಸಿದ್ದರೆ ಜೂನ್​ 7ರಂದು ತಾನು ಒಂದೇ ಬಾರಿಗೆ 10 ಮಕ್ಕಳನ್ನ ಹೆತ್ತಿದ್ದೇನೆ ಎಂದು ಹೇಳಿಕೊಳ್ತಿರುವ 37 ವರ್ಷದ ಗೋಸಿಯಮ್ ತಮಾರಾ ಹಲೀಮಾರ ದಾಖಲೆಯನ್ನ ಮುರಿಯೋಕೆ ಮುಂದಾಗಿದ್ದಾರೆ.

ಈ ಹಿಂದೆ ಅವಳಿ ಮಕ್ಕಳ ತಾಯಿಯಾಗಿದ್ದ ತಮಾರಾ ಸೋಮವಾರ 7 ಗಂಡು ಹಾಗೂ ಮೂವರು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಗೂ ಮುನ್ನ ತಮಾರಾ ತಮಗೆ ಆರು ಮಗು ಜನಿಸಬಹುದು ಎಂದೇ ಭಾವಿಸಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...