ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಗುರುವಾರ ಕೊಲ್ಕತ್ತಾದ ಬೆಹಾಲಾದಲ್ಲಿರುವ ತಮ್ಮ ನಿವಾಸದಲ್ಲಿ 49ನೇ ವರ್ಷದ ಜನ್ಮ ದಿನಾಚರಣೆಯನ್ನ ಆಚರಿಸಿಕೊಂಡಿದ್ದಾರೆ.
ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಈ ವರ್ಷ 2 ಬಾರಿ ಆಸ್ಪತ್ರೆಗೆ ದಾಖಲಾದ ಕಾರಣದಿಂದಾಗಿ ಅತ್ಯಂತ ಸರಳವಾಗಿ ಜನ್ಮ ದಿನ ಆಚರಿಸಿದ್ದಾರೆ.
ದಾದಾ ಸರಳ ಜನ್ಮ ದಿನಾಚರಣೆ ನಡುವೆಯೂ ಅಭಿಮಾನಿಗಳು ನೆಚ್ಚಿನ ಆಟಗಾರನ ಜನ್ಮದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ದಾದಾ ಅಭಿಮಾನಿಗಳಲ್ಲಿ ಒಬ್ಬರಾದ ಪಶ್ಚಿಮ ಬಂಗಾಳದ ನಬದ್ವೀಪ್ ನಿವಾಸಿ, ಚೈತನ್ಯ ಮೂರ್ತಿಯನ್ನ ಉಡುಗೊರೆಯಾಗಿ ನೀಡಿದ್ದಾರೆ.
ಮುಂಜಾನೆಯೇ ಬೆಹಾಲಾದಲ್ಲಿರುವ ಗಂಗೂಲಿ ನಿವಾಸಕ್ಕೆ ಮುಂಜಾನೆಯೇ ತೆರಳಿದ ಅಶೋಕ್, ದಾದಾಗಾಗಿ ಈ ಸುಂದರ ಮೂರ್ತಿಯನ್ನ ತಂದಿದ್ದರು. ಇದು ಮಾತ್ರವಲ್ಲದೇ ಇನ್ನೂ ಅನೇಕರು ಗಂಗೂಲಿ ಚಿತ್ರಕಲಾಕೃತಿ ಸೇರಿದಂತೆ ಅನೇಕ ಉಡುಗೊರೆಗಳನ್ನ ತಂದಿದ್ದರು. ದಾದಾ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಈ ಮೂರ್ತಿಯನ್ನ ತಂದಿದ್ದಾಗಿ ಅಶೋಕ್ ಹೇಳಿದ್ದಾರೆ.
ಡಯಟ್ ನಿರ್ಬಂಧದ ಹಿನ್ನೆಲೆ ಗಂಗೂಲಿಗೆ ಜನ್ಮದಿನದಂದು ತಮ್ಮಿಷ್ಟದ ಬಿರಿಯಾನಿ ಸವಿಯಲು ಸಾಧ್ಯವಾಗಿಲ್ಲ. ಗಂಗೂಲಿ ಪುತ್ರಿ ತಮ್ಮ ತಂದೆಯ ಜನ್ಮದಿನಕ್ಕೆ 2 ವಿಶೇಷ ಕೇಕ್ ತರಿಸಿದ್ದರು. ಪತ್ನಿ ಡೋನಾ ಪತಿಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದಾರೆ.