ಗ್ರಾಮೀಣ ಭಾಗದ ವ್ಯಾಪಾರಿಗಳಿಗೆ ಗುಡ್ ನ್ಯೂಸ್….! ಇಂಟರ್ನೆಟ್ ಸೌಕರ್ಯವಿಲ್ಲದೆಯೇ ಸ್ವೀಕರಿಸಬಹುದು ಡಿಜಿಟಲ್ ಪಾವತಿ | Kannada Dunia | Kannada News | Karnataka News | India News
ಹೊಸ ವೀಸಾ ಡೆಬಿಟ್ ಕಾರ್ಡ್ನಲ್ಲಿರುವ ಚಿಪ್ ದೈನಂದಿನ ಖರ್ಚು ಮಿತಿಯ 2000 ರೂಪಾಯಿ ಸಂಗ್ರಹಣಾ ಮೌಲ್ಯವನ್ನು ಹೊಂದಿರುತ್ತದೆ. ಆರ್ಬಿಐನ ನಿರ್ದೇಶನದಂತೆ ಪ್ರತಿ ವಹಿವಾಟು ಮಿತಿಯು 200 ರೂಪಾಯಿ ಆಗಿದೆ. ಇ ವ್ಯಾಲೆಟ್ಗಳಲ್ಲಿ ಮೊದಲೇ ಹಣವನ್ನು ಲೋಡ್ ಮಾಡಿದ ರೀತಿಯಲ್ಲೇ ಇದು ಕಾರ್ಯ ನಿರ್ವಹಿಸುತ್ತದೆ. ಚಿಪ್ನಲ್ಲಿ ಹಣ ಇಲ್ಲದೇ ಇದ್ದಾಗ ಪಾವತಿ ರದ್ದಾಗುತ್ತದೆ.
ಪಾವತಿ ಅಡಚಣೆಯ ಸಮಸ್ಯೆಯಿಂದ ಪಾರಾಗುವ ಮೂಲಕ ವ್ಯಾಪಾರಿಗಳು ಕೂಡ ಗ್ರಾಹಕರನ್ನು ಕಳೆದುಕೊಳ್ಳುವ ಪ್ರಮೇಯ ಇರುವುದಿಲ್ಲ. ಗ್ರಾಹಕರಿಗೂ ಕೂಡ ಎಟಿಎಂ ಅಲೆಯಬೇಕು ಎಂಬ ಸಮಸ್ಯೆ ಕೂಡ ಇರೋದಿಲ್ಲ.