‘ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ, ಶೀಘ್ರದಲ್ಲೇ ಉದ್ಯೋಗ ನೀತಿಯನ್ನೂ ಜಾರಿಗೆ ತರುತ್ತೇವೆ’ : ಸಿಎಂ ಬೊಮ್ಮಾಯಿ ಹೇಳಿಕೆ 11-10-2021 4:07PM IST / No Comments / Posted In: Karnataka, Latest News, Live News ಕರ್ನಾಟಕದದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯೋಜಿಸಿರುವ ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರವನ್ನು ಉದ್ಘಾಟಿಸಿದ ಬಳಿಕ ಬೊಮ್ಮಾಯಿ ಈ ಹೇಳಿಕೆಯನ್ನು ನೀಡಿದ್ದಾರೆ. ನೈತಿಕ ಪೊಲೀಸ್ಗಿರಿಗೆ ಸಾಥ್ ನೀಡಿದ್ರಾ ಬಿಜೆಪಿ ಶಾಸಕ….? ವಿವಾದದ ಕಿಡಿ ಹೊತ್ತಿಸಿದ ಮೂಡಬಿದ್ರೆ ಎಂಎಲ್ಎ ನಡೆ ದೇಶದಲ್ಲಿ ಅತಿ ಹೆಚ್ಚು ನವೋದ್ಯಮಗಳು ಬೆಂಗಳೂರಿನಲ್ಲಿದೆ.ರಕ್ಷಣೆ, ಇಂಜಿನಿಯರಿಂಗ್, ಅಭಿವೃದ್ಧಿ ಕಂಪನಿಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿದೆ. ಕರ್ನಾಟಕವು ಪ್ರಗತಿಪರ ರಾಜ್ಯವಾಗಿದ್ದು ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ ಎಂದು ಹೇಳಿದ್ರು. ರಾಜ್ಯದಲ್ಲಿ ಕೈಗಾರಿಕಾ ನೀತಿಯ ಜೊತೆಯಲ್ಲಿ ಉದ್ಯಮ ನೀತಿಯನ್ನೂ ರಚಿಸಲಾಗುತ್ತದೆ. ಕರ್ನಾಟಕದಲ್ಲಂತೂ ಹೂಡಿಕೆಗೆ ಉತ್ತಮ ವಾತಾವರಣವಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವವರಿಗೆ ರಾಜ್ಯ ಸರ್ಕಾರವೇ ಪ್ರೋತ್ಸಾಹ ನೀಡಲಿದೆ ಎಂದೂ ಇದೇ ವೇಳೆ ಹೇಳಿದ್ರು. "ಇಡೀ ದೇಶದಲ್ಲೇ ಅತಿಹೆಚ್ಚು ನವೋದ್ಯಮಗಳಿರುವುದು ಕರ್ನಾಟಕದಲ್ಲಿ! ದೇಶದಲ್ಲೇ ಮೊದಲ ಬಾರಿಗೆ ಆರ್ & ಡಿ ನೀತಿ, ಉದ್ಯೋಗ ನೀತಿಗಳನ್ನು ಕರ್ನಾಟಕ ಸರ್ಕಾರ ರೂಪಿಸುತ್ತಿದೆ. ಯುವಜನತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕರ್ನಾಟಕ ಅತ್ಯುತ್ತಮ ರಾಜ್ಯ" : ಮುಖ್ಯಮಂತ್ರಿ @BSBommai. pic.twitter.com/ljERYBsbqQ — CM of Karnataka (@CMofKarnataka) October 11, 2021