alex Certify ಜೀವ ವಿಮಾ ಕಂಪನಿಗಳಲ್ಲೂ ಸಿಗಲಿದೆ ಎನ್‌ಪಿಎಸ್‌ ಉತ್ಪನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವ ವಿಮಾ ಕಂಪನಿಗಳಲ್ಲೂ ಸಿಗಲಿದೆ ಎನ್‌ಪಿಎಸ್‌ ಉತ್ಪನ್ನ

ಕೋವಿಡ್-19 ಸೋಂಕಿನ ಕಾರಣದಿಂದ ಎಲ್ಲೆಡೆ ಹೊಸ ಬದಲಾವಣೆಗಳು ಬಂದಿವೆ. ವೃದ್ಧಾಪ್ಯರ ಸಾಮಾಜಿಕ ಭದ್ರತೆ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಈ ಅವಧಿಯಲ್ಲಿ ಬಹಳಷ್ಟು ಮಂದಿಗೆ ನೆರವಿಗೆ ಬರುತ್ತದೆ.

ಅಟಲ್ ಪಿಂಚಣಿ ಯೋಜನೆಯನ್ನು ಇನ್ನಷ್ಟು ವ್ಯಾಪಕವಾಗಿ ಹರಡುವಂತೆ ಮಾಡಲು ಮುಂದಾಗಿರುವ ಸರ್ಕಾರ ಕಳೆದ ಒಂದು ವರ್ಷದಿಂದ ಎನ್‌ಪಿಎಸ್‌ ಖಾತೆಗಳನ್ನು ತೆರೆಯವುದನ್ನು ಮತ್ತಷ್ಟು ಸರಳಗೊಳಿಸಿದೆ. ಶೀಘ್ರದಲ್ಲಿಯೇ ಎನ್‌ಪಿಎಸ್‌ ಸೇವೆ/ಉತ್ಪನ್ನಗಳನ್ನು ಇನ್ನು ಮುಂದೆ ವಿಮಾ ಸೇವಾದಾರ ಕಂಪನಿಗಳಲ್ಲೂ ಒದಗಿಸಲಾಗುವುದು.

ಈ 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಲಕ್ಷಾಂತರ ರೂಪಾಯಿ ನಿಮ್ಮದಾಗಬಹುದು

ವೈಯಕ್ತಿಕ ಏಜೆಂಟರುಗಳ ಮೂಲಕವೇ ಎನ್‌ಪಿಎಸ್‌ ಉತ್ಪನ್ನಗಳು ಮಾರಬಹುದಾಗಿದೆ. ಎನ್‌ಪಿಎಸ್ ಉತ್ಪನ್ನಗಳನ್ನು ವಿತರಕರಾಗಿ ವಿಮಾ ಸೇವಾದಾರ ಕಂಪನಿಗಳು ಮಾರಾಟ ಮಾಡಲಿವೆ.

18-65 ವರ್ಷ ವಯಸ್ಸಿನ ದೇಶವಾಸಿಗಳು ಎನ್‌ಪಿಎಸ್ ಖಾತೆಯನ್ನು ತೆರೆಯಬಹುದಾಗಿದೆ. ವ್ಯಕ್ತಿಯೊಬ್ಬರು ಎನ್‌ಪಿಎಸ್‌ ಖಾತೆ ಹಾಗೂ ಅಟಲ್ ಪಿಂಚಣಿ ಯೋಜನೆಗಳನ್ನು ಏಕಕಾಲದಲ್ಲಿ ತೆರೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...