
ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಸೋನು ಸೂದ್ ತೋರಿದ ಹೃದಯವಂತಿಕೆ ಯಾರೂ ಮರೆಯಲಾಗದಂತದ್ದು. ಈಗಲೂ ಸಹ ಕಷ್ಟದಲ್ಲಿರುವವರಿಗೆ ಅವರು ನೆರವಾಗುತ್ತಿದ್ದು, ಆದರೆ ಅಭಿಮಾನಿಯೊಬ್ಬ ಮಾಡಿರುವ ಕೆಲಸ ಅವರಿಗೆ ಇಷ್ಟವಾದಂತಿಲ್ಲ.
ಹೌದು, ಸೋನು ಸೂದ್ ಅಭಿಮಾನಿ ರಕ್ತದಲ್ಲಿ ಚಿತ್ರಿಸಿದ ಪೇಂಟಿಂಗ್ ಗಿಫ್ಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, ರಕ್ತವನ್ನು ಇಂತಹ ಕಾರ್ಯಗಳಿಗೆ ಬಳಸಿಕೊಳ್ಳುವ ಬದಲು ರಕ್ತದಾನ ಮಾಡಿ ಮತ್ತೊಬ್ಬರ ಪ್ರಾಣ ಉಳಿಸಿ ಎಂದು ಮನವಿ ಮಾಡಿದ್ದಾರೆ.