ಕಷ್ಟದಲ್ಲಿರುವ ಮಂದಿಯ ನೆರವಿಗೆ ಧಾವಿಸುವ ಮೂಲಕ ಸುದ್ದಿ ಮಾಡುವ ಬಹುಭಾಷಾ ನಟ ಸೋನು ಸೂದ್ ಬಳಿ ಅನೇಕ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬರುತ್ತಾರೆ.
ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದ ವೇಳೆ ಅಲ್ಲಿ ಹುರಿದ ಜೋಳ ಮಾರುವ ವ್ಯಕ್ತಿಯೊಬ್ಬರೊಂದಿಗೆ ಸಂವಾದ ನಡೆಸಿದ ವಿಚಾರವನ್ನು ಸೋನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದಿಂದ ಅಷ್ಟು ದೂರದ ಊರಿಗೆ ಹೋಗಿ ಜೋಳ ಮಾರುತ್ತಾ ಜೀವನ ಕಟ್ಟಿಕೊಳ್ಳುವ ಈ ಶ್ರಮ ಜೀವಿಯನ್ನು ತಮ್ಮದೇ ಶೈಲಿಯಲ್ಲಿ ಪರಿಚಯಿಸಿದ ಸೋನು ಸೂದ್, ಆತನಿಗೆ ಒಬ್ಬ ಹುಡುಗಿಯನ್ನು ಹುಡುಕಲು ನೆರವಾಗಲು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜೋಳದ ವ್ಯಾಪಾರಿಯ ಜೀವನದ ಪರಿಚಯ ಮಾಡಿಕೊಡುವ ಸೋನು, ಆತನೊಂದಿಗೆ ವಿನಮ್ರದಿಂದ ನಡೆದುಕೊಂಡು, ಕಾಳಜಿ ತೋರಿ ಮಾತನಾಡಿದ ಬಗೆಯನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.