alex Certify ರೈಲ್ವೆ ಸ್ಟೇಷನ್‌‌ನಲ್ಲಿದ್ದ ನಾಯಿಯನ್ನ ಮುದ್ದಾಡಿದ ನಟ ಸೋನು ಸೂದ್: ಬಾಲಿವುಡ್ ನಟನ ಸರಳತೆಗೆ ಮೂಕರಾದ ನೆಟ್ಟಿಗರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಸ್ಟೇಷನ್‌‌ನಲ್ಲಿದ್ದ ನಾಯಿಯನ್ನ ಮುದ್ದಾಡಿದ ನಟ ಸೋನು ಸೂದ್: ಬಾಲಿವುಡ್ ನಟನ ಸರಳತೆಗೆ ಮೂಕರಾದ ನೆಟ್ಟಿಗರು…..!

ಬಾಲಿವುಡ್ ನಟ ಸೋನುಸೂದ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತೆರೆಯ ಮೇಲೆ ಖಳನಾಯಕನಾಗಿದ್ದರೂ, ನಿಜ ಜೀವನದಲ್ಲಿ ಸಾವಿರಾರು ಜನರ ಪಾಲಿಗೆ ಹೀರೋ ಆದವರು. ಕಷ್ಟದಲ್ಲಿದ್ದವರಿಗೆ, ನೊಂದ ಜೀವಗಳಿಗೆ ತುಡಿಯುವ ಜೀವ ಅವರದ್ದು. ಅವರು ಮಾಡಿರುವ ಸಹಾಯದಿಂದಲೇ ಎಷ್ಟೋ ಜನರು ಜೀವನವನ್ನ ಕಟ್ಟಿಕೊಂಡಿದ್ದಾರೆ.

ನಟ ಸೋನು ಸೂದ್ ಅವರ ಸರಳತೆಯ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೇ ಇರುತ್ತೆ. ಇತ್ತಿಚೆಗೆ ಅವರು ಮುಂಬೈನ್ ರೇಲ್ವೆ ಸ್ಟೇಷನ್ ಬೆಂಚ್ ಒಂದರಲ್ಲಿ ಮಲಗಿರುವ ವಿಡಿಯೋ ವೈರಲ್ ಆಗಿತ್ತು. ಓರ್ವ ಖ್ಯಾತ ಬಾಲಿವುಡ್ ನಟ ಹಾಗೆ ಮಲಗುವುದು ಅಂದ್ರೆ ಸುಮ್ನೆನಾ, ಇನ್ನೂ ಅದೇ ರೈಲ್ವೆ ಸ್ಟೇಷನ್‌ನಲ್ಲಿ ಓಡಾಡುತ್ತಿದ್ದ ಬೀದಿ ನಾಯಿಯನ್ನೂ ಮುದ್ದಾಡಿದ್ದಾರೆ. ಅದನ್ನ ಈ ವಿಡಿಯೋದಲ್ಲಿ ಗಮನಿಸಬಹುದು.

ಬೀದಿನಾಯಿ ಎಂದು ಇದನ್ನ ನಿರ್ಲಕ್ಷಿಸಬೇಡಿ, ಇವು ಮೂಕಜೀವಿಗಳು, ಇವುಗಳಿಗೂ ಹೃದಯವಿರುತ್ತೆ ಎಂದು ಸೋನುಸೂದ್ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ನನಗೆ ಈ ಮುದ್ದಾದ ನಾಯಿಯನ್ನ ಮನೆಗೆ ಕರೆದುಕೊಂಡು ಹೋಗುವ ಮನಸ್ಸಿದೆ ಎಂದು ಹೇಳಿದ್ದಾರೆ. ಸೋನು ಸೂದ್ ಈ ವಿಡಿಯೋ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈಗಾಗಲೇ ಕೋಟ್ಯಾಂತರ ಜನರು ಇದನ್ನು ವೀಕ್ಷಿಸಿದ್ದಾರೆ. ಇನ್ನೂ ಮಿಲಿಯನ್ಗೂ ಹೆಚ್ಚು ಜನರು ಈ ವಿಡಿಯೋಗೆ ಲೈಕ್ ಕೊಟ್ಟಿದ್ದಾರೆ.

ಈ ವಿಡಿಯೋ ನೋಡಿ ಸಾವಿರಾರು ಜನ ನಟ ಸೋನು ಸೂದ್ ಹೃದಯ ವೈಶಾಲ್ಯತೆಯನ್ನ ಹಾಡಿ ಹೊಗಳಿದ್ದಾರೆ. ಪ್ರಾಣಿಗಳ ಬಗ್ಗೆ ಅವರು ತೋರಿಸಿರುವ ಪ್ರೀತಿಗೆ ಹ್ಯಾಟ್ಸ್ ಆಫ್ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ. ಇನ್ನೂ ಕೆಲವರು ಸೋನು ಸೂದ್ ತೆರೆಯ ಮೇಲೆ ಹಿರೋ ಅಲ್ಲ ರಿಯಲ್ ಹಿರೋ ಎಂದು ಕೂಡ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...