ಸೋನು ಸೂದ್- ಕೇಜ್ರಿವಾಲ್ ಭೇಟಿ ಹಿಂದಿನ ರಹಸ್ಯ ಕೊನೆಗೂ ಬಹಿರಂಗ 27-08-2021 3:34PM IST / No Comments / Posted In: Latest News, India, Live News ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ʼದೇಶ್ ಕೆ ಮೆಂಟರ್ʼ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸೋನು ಸೂದ್ರ ಹೆಸರು ಘೋಷಣೆಯಾಗಿದೆ. ದೆಹಲಿಯಲ್ಲಿಂದು ಸಿಎಂ ಅರವಿಂದ ಕೇಜ್ರಿವಾಲ್ರನ್ನ ನಟ ಸೋನು ಸೂದ್ ಭೇಟಿಯಾಗಿದ್ದು, ಈ ಭೇಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಸುದ್ದಿಗೋಷ್ಠಿಯಲ್ಲಿ ದೇಶ್ ಕೆ ಮೆಂಟರ್ ಕಾರ್ಯಕ್ರಮಕ್ಕೆ ನಟ ಸೋನು ಸೂದ್ ಬ್ರ್ಯಾಂಡ್ ಅಂಬಾಸಿಡರ್ ಎಂದು ಘೋಷಣೆಯಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವೃತ್ತಿಪರರು ಮಾರ್ಗದರ್ಶನ ನೀಡಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಸೋನು ಸೂದ್ ಪರಸ್ಪರ ಚರ್ಚೆ ನಡೆಸುತ್ತಿರೋದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ ಸಿಎಂ ಕೇಜ್ರಿವಾಲ್ ಕೊರೊನಾ ಸಂದರ್ಭದಲ್ಲಿ ದೇಶದ ಜನತೆಗೆ ಸಹಾಯ ಮಾಡಿದ ಸೋನು ಸೂದ್ರ ಮಾನವೀಯ ಮೌಲ್ಯಗಳನ್ನು ಪ್ರಶಂಸಿದ್ರು ಎನ್ನಲಾಗಿದೆ. ಕೇಜ್ರಿವಾಲ್ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಸೆಪ್ಟೆಂಬರ್ ಮಧ್ಯಭಾಗದಿಂದ ಆರಂಭವಾಗಲಿದೆ. ತಮ್ಮ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ ವೃತ್ತಿಪರರು ದೆಹಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಕುರಿತಂತೆ ಮಾರ್ಗದರ್ಶನ ನೀಡಲಿದ್ದಾರೆ. ಸೋನು ಸೂದ್ರನ್ನು ಇಂತಹ ಕಾರ್ಯಕ್ರಮಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದ್ದಕ್ಕೆ ಸಾಕಷ್ಟು ಪ್ರಶಂಸೆಗಳು ಕೇಳಿ ಬಂದಿವೆ. .@SonuSood has been appointed as the brand ambassador of @ArvindKejriwal govt's #DeshKeMentor program! "Today, I have been given an opportunity to mentor lakhs of students. There is no greater service than guiding students. I am sure together we can & we will" – Sonu Sood pic.twitter.com/uLR5wOVkgM — AAP (@AamAadmiParty) August 27, 2021