![](https://kannadadunia.com/wp-content/uploads/2021/06/sonusood_fan11062021_c.jpg)
ಟ್ವಿಟರ್ನಲ್ಲಿ ಅಭಿಮಾನಿಯನ್ನ ಭೇಟಿಯಾದ ಫೋಟೋ ಶೇರ್ ಮಾಡಿರುವ ಸೋನು ಸೂದ್, ಅಭಿಮಾನಿಗಳ ಬಳಿ ನನ್ನ ಭೇಟಿಯಾಗಲು ಈ ರೀತಿಯ ಕಷ್ಟವನ್ನ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿರುವ ಸೋನು ಸೂದ್, ವೆಂಕಟೇಶ್ ನನ್ನನ್ನ ಭೇಟಿಯಾಗುವ ಸಲುವಾಗಿ ಹೈದರಾಬಾದ್ನಿಂದ ಮುಂಬೈವರೆಗೆ ಬರಿಗಾಲಿನಲ್ಲೇ ನಡೆದು ಬಂದಿದ್ದಾರೆ. ಇವರು ನಿಜಕ್ಕೂ ಸ್ಪೂರ್ತಿದಾಯಕ . ಆದರೂ ಈ ರೀತಿಯ ಕಷ್ಟ ತೆಗೆದುಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ.
ಕೋವಿಡ್ 19 ಸಂದರ್ಭದಲ್ಲಿ ಸೋನು ಸೂದ್ ವಲಸೆ ಕಾರ್ಮಿಕರು ಹಾಗೂ ಕೊರೊನಾದಿಂದಾಗಿ ಚಿಕಿತ್ಸೆಗಾಗಿ ಪರದಾಡುತ್ತಿರುವವರ ಪಾಲಿಗೆ ದೇವರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಸೋನು ಸೂದ್ ತಮ್ಮ ಮಾನವೀಯ ಕಾರ್ಯದ ಮೂಲಕವೇ ಗಳಿಸಿದ್ದಾರೆ.