alex Certify ಸೋನಾಲಿ ಪೋಗಟ್​ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್;‌ ಅಸಹಜ ಸಾವಿನ ಬಳಿಕ ಈಗ ಕೊಲೆ ಕೇಸ್‌ ದಾಖಲಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನಾಲಿ ಪೋಗಟ್​ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್;‌ ಅಸಹಜ ಸಾವಿನ ಬಳಿಕ ಈಗ ಕೊಲೆ ಕೇಸ್‌ ದಾಖಲಿಸಿದ ಪೊಲೀಸರು

ಬಿಜೆಪಿ ನಾಯಕಿ ಮತ್ತು ಬಿಗ್​ ಬಾಸ್​ ತಾರೆ ಸೋನಾಲಿ ಪೋಗಟ್​ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದ್ದು, ಆಕೆಯ ಸಹೋದರ ರಿಂಕು ಧಾಕಾ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

ಗೋವಾದಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆಪಾದಿದ್ದು, ಆಕೆಯ ಇಬ್ಬರು ಆಪ್ತ ಸಹಾಯಕರಾದ ಸುಧೀರ್​ ಸಾಂಗ್ವಾನ್​ ಮತ್ತು ಸುಖ್ವಿಂದರ್​ ಭಾಗಿಗಳು ಎಂದು ಹೇಳಿದ್ದಾರೆ.

ಸೋನಾಲಿ ಪೋಗಟ್​ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಗೋವಾ ಪೊಲೀಸರು ಕೊಲೆ (ಐಪಿಸಿ ಸೆಕ್ಷನ್​ 302) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ ನಂತರ ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಕ್​ಟಾಕ್​ನಲ್ಲಿ ಖ್ಯಾತಿ ಪಡೆದ ಹರಿಯಾಣದ ಹಿಸಾರ್​ನ ಬಿಜೆಪಿ ನಾಯಕಿ 42 ವರ್ಷದ ಸೋನಾಲಿ ಪೋಗಟ್​ ಮಂಗಳವಾರ ಬೆಳಿಗ್ಗೆ ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದ ಸೇಂಟ್​ ಆಂಥೋನಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಳಿಕ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಫೋರೆನ್ಸಿಕ್​ ತಜ್ಞರ ತಂಡವು ಇಲ್ಲಿಗೆ ಸಮೀಪದ ಬಾಂಬೋಲಿಮ್​ನಲ್ಲಿರುವ ಗೋವಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ಶವಪರೀಕ್ಷೆ ನಡೆಸಿತು.

ನಂತರ, ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೋಗಟ್​ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಜಸ್ಪಾಲ್​ ಸಿಂಗ್​ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.

ಪೋಗಟ್​ ಸಹೋದರ ರಿಂಕು ಢಾಕಾ ಬುಧವಾರ ಆಕೆಯನ್ನು ಆಕೆಯ ಇಬ್ಬರು ಸಹಚರರು ಕೊಲೆ ಮಾಡಿದ್ದಾರೆ. ಆ ಇಬ್ಬರು ವ್ಯಕ್ತಿಗಳ ವಿರುದ್ಧ ಗೋವಾ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್​ಐಆರ್​) ದಾಖಲಿಸಿದ ನಂತರವೇ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಾಗಿ ಹೇಳಿದ್ದರು.

ಮರಣೋತ್ತರ ಪರೀಕ್ಷೆ ಪೂರ್ಣ ವಿಡಿಯೋ ಮಾಡಿದ ನಂತರ ದೂರಿಗೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...