ದೇಶದಲ್ಲೇ ಅತಿ ಕ್ಲಿಷ್ಟ ಮತ್ತು ಪ್ರತಿಷ್ಠಿತ ಪ್ರವೇಶ ಪರೀಕ್ಷೆ ಎಂಬ ಹೆಗ್ಗಳಿಕೆಯ ’ಜೆಇಇ’ ಪರೀಕ್ಷೆಯನ್ನು ಬಡ ಅರ್ಚಕರ ಪುತ್ರನೊಬ್ಬ ಕೋಚಿಂಗ್ ಇಲ್ಲದೆಯೇ ಪಾಸ್ ಮಾಡಿದ್ದಾನೆ.
ಒಂದು ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ನೆಲದ ಮೇಲೆ ಕುಳಿತುಕೊಂಡು, ಪೋಷಕರ ಆಸೆ ಈಡೇರಿಸುವ ಸಂಕಲ್ಪದಿಂದ ಶ್ರಮವಹಿಸಿದ ದೂಧ್‌ನಾಥ್ ತಿವಾರಿಗೆ 548ನೇ ಶ್ರೇಣಿ ಒಲಿದಿದೆ. ಉತ್ತರಪ್ರದೇಶದ ಮುಜಾಫ್ಫರ್‌ಪುರದ ಛಾಂದ್ವಾರದಲ್ಲಿ ಮಗನಿಗಾಗಿ ಅರ್ಚಕ ಅಶೋಕ್ ತಿವಾರಿ ಅವರು ಕಷ್ಟಪಟ್ಟು ಒಂದು ಸಣ್ಣ ಬಾಡಿಗೆ ಅಪಾರ್ಟ್‌ಮೆಂಟ್ ಪಡೆದುಕೊಂಡಿದ್ದರು. ಓದಿಗೆ ಭಂಗವಾಗಬಾರದು ಎಂದು ಅವರು ಪಟ್ಟ ಶ್ರಮವು ಫಲಿಸಿದೆ.
JEE ಮೇನ್ ಪರೀಕ್ಷೆ ಫಲಿತಾಂಶದ ಬಗ್ಗೆ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಈ ದಿನದಂದು ಪ್ರಕಟವಾಗಲಿದೆ ರಿಸಲ್ಟ್
ನನ್ನ ಜೀವನವಂತೂ ಬಡತನದಲ್ಲೇ ಮುಗಿದು ಹೋಯಿತು. ಮಗನಾದರು ಆರ್ಥಿಕ ಸಬಲತೆ ಕಾಣಲಿ ಎನ್ನುವ ಆಸೆ ನನ್ನದಾಗಿತ್ತು. ಅದರಂತೆ ಆತ ಕೂಡ ಸಾಕು ಎನ್ನುವಷ್ಟರ ಮಟ್ಟಿಗೆ ಓದುತ್ತಿದ್ದ. ಜೆಇಇ ಅಡ್ವಾನ್ಸಡ್ ತೇರ್ಗಡೆಯಾಗಿ, ಪ್ರತಿಷ್ಠಿತ ಕಾಲೇಜು ಸೇರಿದರೆ ದೂಧ್‌ನಾಥ್ ಭವಿಷ್ಯ ಉಜ್ವಲವಾಗಲಿದೆ ಎನ್ನುತ್ತಾ ಕಣ್ಣೀರಿಡುತ್ತಾರೆ ಪಂಡಿತ್ ಅಶೋಕ್ ತಿವಾರಿ.