alex Certify ವಂಚಿಸಿದ ಸಂಗಾತಿ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೆಲಸ ಮಾಡಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚಿಸಿದ ಸಂಗಾತಿ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೆಲಸ ಮಾಡಿದ ಭೂಪ

ವಾಷಿಂಗ್ಟನ್ ಡಿಸಿ: ವಂಚಿಸಿದ ಸಂಗಾತಿಯ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದವನೊಬ್ಬ ಕಾರಿನ ಮೇಲೆ ಮೈಕ್ ಒಬ್ಬ ಮೋಸಗಾತಿ ಎಂಬುದನ್ನು ಕಪ್ಪು ಶಾಯಿಯಲ್ಲಿ ಬರೆದಿದ್ದಾನೆ.

ಈಶಾನ್ಯ ವಾಷಿಂಗ್ಟನ್‌ನಲ್ಲಿ ನಿಲುಗಡೆ ಮಾಡಲಾಗಿದ್ದ ಎಸ್‍ಯುವಿ ಕಾರಿನಲ್ಲಿ ಬರೆಯಲಾಗಿದ್ದ ಈ ಸಂದೇಶ ಓದಿದ ಕಾರಿನ ಮಾಲೀಕರಾದ ನೆದ್ರಾ ಬ್ರಾಂಟ್ಲಿ ಎಂಬಾಕೆ ದಿಗ್ಭ್ರಮೆಗೊಂಡಿದ್ದಾರೆ. ಹಾನಿಗೊಳಗಾದ ತನ್ನ ಕಾರನ್ನು ನೋಡಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅಲ್ಲದೆ ಮೈಕ್ ಯಾರೆಂಬುದು ತನಗೆ ಗೊತ್ತಿಲ್ಲ. ತಾನು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.

ವಾಸ್ತವವಾಗಿ ಕ್ರುದ್ಧಗೊಂಡ ವ್ಯಕ್ತಿಯು ತಪ್ಪಾಗಿ ಇವರ ಕಾರಿನ ಮೇಲೆ ಬರೆದಿದ್ದಾರೆ ಎಂದು ಹೇಳಲಾಗಿದೆ. ಇನ್ನು, ಕಾರಿನ ಮುಂಭಾಗ ಮತ್ತು ಹಿಂಭಾಗದ ಗಾಜುಗಳು ಕೂಡ ಜಖಂಗೊಂಡಿವೆ. ತನ್ನ ವಿಮಾ ಕಂಪನಿಯು ಹಾನಿಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿರುವುದರಿಂದ ನೆದ್ರಾ ನಿಟ್ಟುಸಿರುಬಿಟ್ಟಿದ್ದಾರೆ.

ಈ ಹಿಂದೆ ಕೂಡ ಹಲವಾರು ಇಂಥ ಘಟನೆಗಳು ನಡೆದಿದೆ. ಮೋಸ ಮಾಡಿದ ಗೆಳಯ ಅಥವಾ ಗೆಳತಿಗಾಗಿ ಕಾದು ನಿಂತು ತಕ್ಕ ಪಾಠ ಕಲಿಸಿದವರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...