alex Certify BREAKING NEWS: ಸೋಮಾಲಿಯಾದಲ್ಲಿ ಉಗ್ರರ ಅಟ್ಟಹಾಸ, ಹೋಟೆಲ್ ಗೆ ನುಗ್ಗಿ 9 ಜನರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಸೋಮಾಲಿಯಾದಲ್ಲಿ ಉಗ್ರರ ಅಟ್ಟಹಾಸ, ಹೋಟೆಲ್ ಗೆ ನುಗ್ಗಿ 9 ಜನರ ಹತ್ಯೆ

ಮೊಗಾದಿಶು: ಅಲ್-ಶಬಾಬ್ ಇಸ್ಲಾಮಿಸ್ಟ್ ಉಗ್ರರು ಸೋಮಾಲಿಯಾದಲ್ಲಿ ಅಟ್ಟಹಾಸ ಮೆರೆದಿದ್ದು, 9 ಜನರನ್ನು ಹತ್ಯೆ ಮಾಡಿದ್ದಾರೆ.

ದಕ್ಷಿಣ ಸೊಮಾಲಿಯಾದ ಕಿಸ್ಮಾಯೊದಲ್ಲಿನ ಹೋಟೆಲ್‌ ನಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. 47 ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ಮೊಗಾದಿಶು ಮತ್ತು ಮಧ್ಯ ಸೊಮಾಲಿಯಾವನ್ನು ಗುರಿಯಾಗಿಸಿಕೊಂಡಿರುವ ಅಲ್-ಖೈದಾ-ಸಂಬಂಧಿತ ಗುಂಪಿನ ದಾಳಿ ಇದಾಗಿದೆ.

ದಾಳಿಕೋರರನ್ನು ಭದ್ರತಾ ಪಡೆಗಳು ಕೊಂದು ಹಾಕಿದ್ದಾರೆ. ಮೃತಪಟ್ಟವರಲ್ಲಿ ಹತ್ತಿರದ ಶಾಲೆ ವಿದ್ಯಾರ್ಥಿಗಳು ಸೇರಿದ್ದಾರೆ. ಆತ್ಮಹತ್ಯಾ ಬಾಂಬರ್ ಸೇರಿದಂತೆ ಎಲ್ಲಾ ನಾಲ್ವರು ದಾಳಿಕೋರರು ಕೊಲ್ಲಲ್ಪಟ್ಟರು ಎಂದು ಜುಬಾಲ್ಯಾಂಡ್ ಭದ್ರತಾ ಸಚಿವ ಯೂಸುಫ್ ಹುಸೇನ್ ಒಸ್ಮಾನ್ ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...