alex Certify ಕಣ್ಣಂಚನ್ನು ತೇವಗೊಳಿಸುತ್ತೆ ಸೈನಿಕ ಪತ್ನಿಯನ್ನು ಭೇಟಿಯಾದ ಭಾವುಕ ಕ್ಷಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಸೈನಿಕ ಪತ್ನಿಯನ್ನು ಭೇಟಿಯಾದ ಭಾವುಕ ಕ್ಷಣ

ಜೀವದ ಹಂಗುತೊರೆದು ದೇಶ ರಕ್ಷಣೆಯಲ್ಲಿ ತೊಡಗಿದ ಸೈನಿಕ ಏಕಾಏಕಿ ಕಣ್ಣಮುಂದೆ ಹಾಜರಾಗಿ ಪತ್ನಿ ಮುಂದೆ ಸರ್‌ಪ್ರೈಸ್ ನೀಡಿದರೆ ಹೇಗಾಗಬೇಡ!

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಂಥದ್ದೊಂದು ಸರ್ಪ್ರೈಸ್ ಸನ್ನಿವೇಶ ಕಾಣಬಹುದಾಗಿದೆ. ನಿಯೋಜನೆಯಿಂದ ಹಿಂದಿರುಗಿದ ನಂತರ ಸೈನಿಕನು ಕೆಲಸದಲ್ಲಿ ನಿರತರಾಗಿದ್ದ ಹೆಂಡತಿಯನ್ನು ಆಚ್ಚರಿಗೊಳಿಸುತ್ತಾನೆ.

ಪಕ್ಕಾ ಮಾಡೆಲ್‍ನಂತೆ ರ್ಯಾಂಪ್ ವಾಕ್ ಮಾಡಿದ ಪುಟ್ಟ ಹುಡುಗಿ ಈಗ ಸ್ಟಾರ್…..!

ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ವೈರಲ್ ಆಗುತ್ತಿದೆ. ಸಣ್ಣ ಕ್ಲಿಪ್ ಅನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದುವರೆಗೆ ಸುಮಾರು ಸಾವಿರಾರು ವೀಕ್ಷಣೆ ಕಂಡಿದೆ.

ಯೋಧ ಮತ್ತು ಅವರ ಪತ್ನಿ ಹಂಚಿಕೊಂಡ ಕ್ಷಣವು ನೋಡುಗರಿಗೆ ಸಂತೋಷದ ಕಣ್ಣೀರನ್ನು ತರಲೂಬಹುದು. ಡಮಿಲಾರ್ ಅವರು 11 ತಿಂಗಳು ವಿದೇಶದಲ್ಲಿ ನಿಯೋಜಿಸಲ್ಪಟ್ಟಿದ್ದರು ಮತ್ತು ಅವರು ಹಿಂದಿರುಗಿದ ನಂತರ ಪತ್ನಿ ಎಲಿಜಬೆತ್ ಕೆಲಸದ ಸ್ಥಳದಲ್ಲಿಯೇ ಅಚ್ಚರಿಗೊಳಿಸಲು ನಿರ್ಧರಿಸಿದ್ದಾರೆ.

ಎಲಿಜಬೆತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಂತೆ ವಿಡಿಯೋದಲ್ಲಿ ತೋರುತ್ತಿದೆ. ಡಮಿಲಾರ್ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಕುಳಿತಿದ್ದು, ಪತ್ನಿ ಎಲಿಜಬೆತ್ ತನ್ನ ಸಹೋದ್ಯೋಗಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ತನ್ನ ಗಂಡನನ್ನು ನೋಡಿ ಹಿರಿಹಿರಿ ಹಿಗ್ಗಿದ್ದಾಳೆ.

ಪತಿಯನ್ನು ಕಂಡೊಡನೆ ಭಾವನೆ ಹಿಡಿದಿಟ್ಟುಕೊಳ್ಳಲಾಗದೇ ಆಕೆ ಸಂತೋಷದಿಂದ ಕಣ್ಣೀರು ಸುರಿಸಿದಳು, ಕೊನೆಗೆ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...