alex Certify ಎರಡೂವರೆ ಅಡಿಯ ಅಜೀಮ್ ಮನ್ಸೂರಿ ಮದುವೆಯಾಗಲು ಕ್ಯೂ ನಿಂತ ಹುಡುಗಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡೂವರೆ ಅಡಿಯ ಅಜೀಮ್ ಮನ್ಸೂರಿ ಮದುವೆಯಾಗಲು ಕ್ಯೂ ನಿಂತ ಹುಡುಗಿಯರು..!

ಕೈರಾದ ಅಜೀಮ್ ಮನ್ಸೂರ್ ವಿವಾಹ ಮತ್ತೆ ಸುದ್ದಿಯಲ್ಲಿದೆ. 2 ಅಡಿ 3 ಇಂಚಿರುವ ಅಜೀಮ್ ಮನ್ಸೂರಿ ಮದುವೆಗೆ ಹುಡುಗಿ ಹುಡುಕುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಮನ್ಸೂರಿ, ಮಾಜಿ ಮುಖ್ಯಮಂತ್ರಿಗಳಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರಿಗೂ ಮದುವೆ ಮಾಡಿಸುವಂತೆ ವಿನಂತಿ ಮಾಡಿದ್ದ. ಆದ್ರೆ ಮದುವೆಯಾಗಿರಲಿಲ್ಲ. ನಂತ್ರ ಶಾಮ್ಲಿಯ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಮನವಿ ಸಲ್ಲಿಸಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿತ್ತು.

ಇದಾದ್ಮೇಲೆ ಅಜೀಮ್ ಅದೃಷ್ಟ ಖುಲಾಯಿಸಿದೆ. ಅಜೀಮ್ ಮದುವೆಯಾಗಲು ಹುಡುಗಿಯರು ಸಾಲಿನಲ್ಲಿ ನಿಂತಿದ್ದಾರೆ. ಗಾಜಿಯಾಬಾದ್, ಬುಲಂದ್‌ಶಹರ್, ದೆಹಲಿ, ಬಿಹಾರ ಮತ್ತು ಇತರ ಹಲವು ಸ್ಥಳಗಳಿಂದ ಆಫರ್ ಬರಲು ಶುರುವಾಗಿದೆ.

ಆದ್ರೆ ಯಾವ ಹುಡುಗಿಯನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿ ಅಜೀಮ್ ಇದ್ದಾನೆ. ಅಜೀಮ್ ಮನ್ಸೂರಿಯ ಕುಟುಂಬ ಸದಸ್ಯರು, ಈ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅನೇಕ ಹುಡುಗಿಯರು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವ ಮೂಲಕ ಅಜೀಮ್ ಮನ್ಸೂರಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ದೆಹಲಿ ಹುಡುಗಿಯೊಬ್ಬಳು ವಿಡಿಯೋ ಕಳುಹಿಸಿದ್ದಾಳೆ. ಅದ್ರಲ್ಲಿ ಅಜೀಮ್ ನನ್ನು ಇಷ್ಟಪಡುವುದಾಗಿ ಹೇಳಿದ್ದಾಳೆ. ಮದುವೆ ಪ್ರಸ್ತಾಪದಿಂದ ಖುಷಿಯಾಗಿರುವ ಅಜೀಮ್ ಹಾಡು ಬರೆಯಲು ಶುರು ಮಾಡಿದ್ದಾನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...