alex Certify ’ಬಡವ ಜೆಟ್‌ ಏರಿದರೆ ಏನು ತೊಂದರೆ ಸ್ವಾಮಿ….? ’ ಸಿಎಂ ಖಡಕ್‌ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಬಡವ ಜೆಟ್‌ ಏರಿದರೆ ಏನು ತೊಂದರೆ ಸ್ವಾಮಿ….? ’ ಸಿಎಂ ಖಡಕ್‌ ಪ್ರಶ್ನೆ

ರಾಜಕೀಯ ಮೇಲಾಟಗಳ ಬಳಿಕ ಪಂಜಾಬ್‌ ಕಾಂಗ್ರೆಸ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಪ್ರಾಬಲ್ಯ ಹೆಚ್ಚಿದ್ದು, ಹೈಕಮಾಂಡ್‌ ಕೂಡ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಿ ಚರಣಜೀತ್‌ ಸಿಂಗ್‌ ಛನ್ನಿ ಅವರನ್ನು ಹೊಸ ಸಿಎಂ ಆಗಿಸಿದೆ.

ಆದರೆ, ಅವರು ಹೈಕಮಾಂಡ್‌ ಭೇಟಿಗಾಗಿ ಖಾಸಗಿ ಜೆಟ್‌ವಿಮಾನದಲ್ಲಿ ದಿಲ್ಲಿಗೆ ಹಾರಿರುವುದು, ಪ್ರತಿಪಕ್ಷ ಗಳ ಕಣ್ಣು ಕೆಂಪಾಗಿಸಿದೆ. ‘ನಾನೊಬ್ಬ ಸಾಮಾನ್ಯ ಮನುಷ್ಯʼ, ‘ದಲಿತ ಸಮುದಾಯದವ’ , ‘ಕಾಂಗ್ರೆಸ್‌ ಕಾರ್ಯಕರ್ತ ಮಾತ್ರ’ ಎಂದು ಹೇಳಿಕೊಂಡಿದ್ದ ಛನ್ನಿ ಅವರು ಖಾಸಗಿ ವಿಮಾನಕ್ಕೆ ದುಬಾರಿ ಶುಲ್ಕ ಪಾವತಿಸಿ ದಿಲ್ಲಿಗೆ ಹಾರುವುದು ಎಷ್ಟು ಸರಿ ಎಂದು ಅಕಾಲಿ ದಳ ಮತ್ತು ಆಮ್‌ ಆದ್ಮಿ ಪಕ್ಷ ಗಳ ನಾಯಕರು ಪ್ರಶ್ನಿಸಿದ್ದರು.

ಮಳೆ ಬರುತ್ತಿದ್ದಾಗ ಕೊಡೆಯಡಿ ನಿಂತು ಟ್ರಾಫಿಕ್‌ ಪೊಲೀಸ್‌ ಗೆ ಸಾಥ್ ನೀಡಿದ ಶ್ವಾನ…!

ಇದಕ್ಕೆ ಖಡಕ್‌ ಉತ್ತರ ನೀಡಿರುವ ಸಿಎಂ ಛನ್ನಿ ಅವರು, ’’ ಒಬ್ಬ ಬಡವ ಜೆಟ್‌ ವಿಮಾನ ಏರಿದರೆ, ನಿಮಗೇನು ಸ್ವಾಮಿ ತೊಂದರೆ ’’ ಎಂದು ಪ್ರತಿಪಕ್ಷ ಗಳಿಗೆ ತಿರುಗೇಟು ಕೊಟ್ಟು ಕೇಳಿದ್ದಾರೆ.

ಆದರೆ ತಮ್ಮ ಖಾಸಗಿ ವಿಮಾನ ಪ್ರಯಾಣಕ್ಕೆ ಹಣ ಕೊಟ್ಟವರು ಯಾರು, ಸರ್ಕಾರದ ಹಣವೇ ಅಥವಾ ಜತೆಯಲ್ಲಿದ್ದ ಸಿಧು ಅವರು ವೆಚ್ಚ ಭರಿಸಿದರೇ ಎಂಬ ಹಲವು ಅನುಮಾನಗಳಿಗೆ ಮಾತ್ರ ಸಿಎಂ ಛನ್ನಿ ಇನ್ನೂ ಕೂಡ ತೆರೆ ಎಳೆದಿಲ್ಲ.

ಜನರ ತೆರಿಗೆ ದುಡ್ಡಲ್ಲಿ ವಿಮಾನ ಹಾರಾಟ ಬೇಕಿತ್ತೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಜಾರಿಕೊಂಡು ಕಾರೊಳಗೆ ನುಸುಳುವ, ಸಿಎಂ ಪಲಾಯನಗೈದಿರುವುದು ಸ್ಥಳೀಯ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ಚಂಡೀಗಢದಿಂದ ದೆಹಲಿಯು ಕೇವಲ 250 ಕಿ.ಮೀ ದೂರದಲ್ಲಿದೆ. ಹಾಗಿದ್ದೂ 16 ಸೀಟುಗಳ ಖಾಸಗಿ ವಿಮಾನ ಯಾಕೆ ಬೇಕಿತ್ತು ಎಂದು ಶಿರೋಮಣಿ ಅಕಾಲಿ ದಳ ಪಕ್ಷವು ಟ್ವೀಟ್‌ ಮೂಲಕ ಖಾರವಾಗಿ ಪ್ರಶ್ನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...