alex Certify ಮಳೆ ಬರುತ್ತಿದ್ದಾಗ ಕೊಡೆಯಡಿ ನಿಂತು ಟ್ರಾಫಿಕ್‌ ಪೊಲೀಸ್‌ ಗೆ ಸಾಥ್ ನೀಡಿದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆ ಬರುತ್ತಿದ್ದಾಗ ಕೊಡೆಯಡಿ ನಿಂತು ಟ್ರಾಫಿಕ್‌ ಪೊಲೀಸ್‌ ಗೆ ಸಾಥ್ ನೀಡಿದ ಶ್ವಾನ…!

ಕೋಲ್ಕತ್ತಾ: ಕಳೆದ ಕೆಲ ದಿನಗಳಿಂದ ಕೋಲ್ಕತ್ತಾದಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ನಗರದ ಹಲವು ಪ್ರಮುಖ ರಸ್ತೆಗಳು ಮತ್ತು ಒಂದೆರಡು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಈ ಮಧ್ಯೆ ಕೋಲ್ಕತ್ತಾ ಪೊಲೀಸ್‌ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಎಲ್ಲರ ಗಮನಸೆಳೆದಿದೆ.

ಹೌದು, ಟ್ವಿಟ್ಟರ್ ನಲ್ಲಿ ಫೋಟೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದು ಎಲ್ಲರ ಗಮನಸೆಳೆದಿದೆ. ಈ ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಭಾರೀ ಮಳೆಯ ವೇಳೆ ಕೊಡೆ ಹಿಡಿದು ನಿಂತಿದ್ದರು. ಆದರೆ, ಜನರ ಗಮನ ಸೆಳೆದಿದ್ದು, ಟ್ರಾಫಿಕ್ ಪೊಲೀಸ್ ಹಿಡಿದಿದ್ದ ಕೊಡೆಯಡಿಯಲ್ಲಿ ಆಶ್ರಯ ಪಡೆದಿದ್ದ ಎರಡು ಬೀದಿ ನಾಯಿಗಳು. ಒಂದೆಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ, ಪೊಲೀಸ್ ಕೊಡೆ ಹಿಡಿದು ಟ್ರಾಫಿಕ್ ಅನ್ನು ನಿಯಂತ್ರಿಸುತ್ತಿದ್ದರು.

ಈ ವೇಳೆ ಕೊಡೆಯಡಿಯಲ್ಲಿ ಆಶ್ರಯ ಪಡೆದ ನಾಯಿಗಳು ಪೊಲೀಸ್ ಗೆ ಕಂಪನಿ ನೀಡಿವೆ. ಪೊಲೀಸರ ಅಧಿಕೃತ ಟ್ವಿಟ್ಟರ್ ನಲ್ಲಿ ‘ದಿನದ ಕ್ಷಣ’ ಎಂದು ಶೀರ್ಷಿಕೆ ಬರೆದು ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೆಟ್ಟಿಗರ ಹೃದಯಗೆದ್ದಿದೆ.

— Kolkata Police (@KolkataPolice) September 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...