ಅಮೆರಿಕದಲ್ಲಿ ಜುಲೈ 4ನೇ ತಾರೀಖನ್ನ ಸ್ವಾತಂತ್ರ್ಯ ದಿನಾಚರಣೆ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತಕ್ಕಿಂತ ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಪೂಲ್ ಪಾರ್ಟಿಗಳ ಮೂಲಕ ಈ ದಿನವನ್ನ ಎಂಜಾಯ್ ಮಾಡಲಾಗುತ್ತದೆ. ಸಾಕಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗುತ್ತದೆ.
ಫೇಸ್ಬುಕ್ ಸ್ಥಾಪಕ ಜುಕರ್ ಬರ್ಗ್ ಕೂಡ ಈ ದಿನವನ್ನ ಸಖತ್ ಎಂಜಾಯ್ ಮಾಡಿದ್ದಾರೆ. ಅಮೆರಿಕದ ಧ್ವಜವನ್ನ ಕೈಯಲ್ಲಿ ಹಿಡಿದಿರುವ ವಿಡಿಯೋವನ್ನ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋಗಳನ್ನ ಜುಕರ್ ಬರ್ಗ್ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದೆ.
ಎರಡೂ ವೇದಿಕೆಗಳಲ್ಲಿ ವಿಡಿಯೋವನ್ನ ಶೇರ್ ಮಾಡಿರುವ ಜುಕರ್ ಬರ್ಗ್ ತನ್ನ ಅನುಯಾಯಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋ 1 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ.