alex Certify ಕೊರೊನಾ ʼಲಸಿಕೆʼ ಪಡೆದವರಿಗೆ ಸಿಗುತ್ತೆ ಉಚಿತ ಐಸ್​ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ʼಲಸಿಕೆʼ ಪಡೆದವರಿಗೆ ಸಿಗುತ್ತೆ ಉಚಿತ ಐಸ್​ಕ್ರೀಂ

ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರೆತಿದ್ದು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲಾಗ್ತಿದೆ.

ವಿಜ್ಞಾನಿಗಳು ಹಾಗೂ ಸರ್ಕಾರದ ವಿಶ್ವಾಸದ ಬಳಿಕವೂ ಅನೇಕರಿಗೆ ಕೊರೊನಾ ಲಸಿಕೆಗಳ ಬಗ್ಗೆ ಇನ್ನೂ ವಿಶ್ವಾಸ ಮೂಡಿಲ್ಲ. ಏನಾದರೂ ಅಡ್ಡ ಪರಿಣಾಮ ಉಂಟಾದರೆ ಅಂತಾ ಅನೇಕರು ಲಸಿಕೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ.

ಜನರಲ್ಲಿ ಈ ಭಯವನ್ನ ಹೋಗಲಾಡಿಸುವ ಸಲುವಾಗಿ ದೇಶದ ನಾಯಕರು ವಿವಿಧ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಅನೇಕ ದೇಶಗಳಲ್ಲಿ ದೇಶದ ಪ್ರಧಾನಿ, ಅಧ್ಯಕ್ಷರೇ ಕೊರೊನಾ ಲಸಿಕೆಯನ್ನ ಮೊದಲು ತೆಗೆದುಕೊಂಡಿದ್ದಾರೆ.

ಆದರೆ ಮಾಸ್ಕೋದಲ್ಲಿ ಮಾತ್ರ ಜನರನ್ನ ಕೊರೊನಾ ಲಸಿಕೆಗಳನ್ನ ಸೆಳೆಯಲು ಹೊಸ ಪ್ಲಾನ್​ ಒಂದನ್ನ ರೂಪಿಸಲಾಗಿದೆ. ಕೇವಲ 38 ಪ್ರತಿಶತ ರಷ್ಯಾದ ಜನತೆ ಲಸಿಕೆ ತೆಗೆದುಕೊಳ್ಳಲು ಸಿದ್ಧರಿರೋದ್ರಿಂದ ಜನರನ್ನ ಲಸಿಕೆಯತ್ತ ಸೆಳೆಯಲು ಐಸ್​ ಕ್ರೀಂನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಬ್ಲೂಮ್​ ಬರ್ಗ್ ವರದಿ ಮಾಡಿದೆ.

ದೇಶದಲ್ಲಿದೆ ಇನ್ನೂ 1,48,609 ಕೋವಿಡ್ ಸಕ್ರಿಯ ಪ್ರಕರಣ – ಒಂದೇ ದಿನದಲ್ಲಿ 11 ಸಾವಿರಕ್ಕೂ ಅಧಿಕ ಕೇಸ್ ಗಳು ಪತ್ತೆ

ಸ್ಪುಟ್ನಿಕ್​ ವಿ ಲಸಿಕೆ ಅತಿಯಾದ ಪೂರೈಕೆ ಇರುವ ಪ್ರದೇಶಗಳಲ್ಲಿ ಮಾಸ್ಕೋ ಕೂಡ ಒಂದು. ಆದರೆ ಅನೇಕರು ವ್ಯಾಕ್ಸಿನೇಷನ್​ ಡ್ರೈವ್​ನಿಂದ ಹೊರಗುಳಿಯುತ್ತಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆ ಈ ಉಚಿತ ಐಸ್​ಕ್ರೀಂ ಪ್ಲಾನ್​ ಮಾಡಲಾಗಿದೆ.

ರೆಡ್​ ಸ್ಕ್ವೇರ್​ ಮಾಲ್​ನಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐಸ್​ಕ್ರೀಂ ಆಫರ್​​ ಬಳಿಕ ಇದೀಗ ಜನರ ಸಂಖ್ಯೆ ಏರಿಕೆಯಾಗ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...