ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರೆತಿದ್ದು ವ್ಯಾಕ್ಸಿನೇಷನ್ ಡ್ರೈವ್ ನಡೆಸಲಾಗ್ತಿದೆ.
ವಿಜ್ಞಾನಿಗಳು ಹಾಗೂ ಸರ್ಕಾರದ ವಿಶ್ವಾಸದ ಬಳಿಕವೂ ಅನೇಕರಿಗೆ ಕೊರೊನಾ ಲಸಿಕೆಗಳ ಬಗ್ಗೆ ಇನ್ನೂ ವಿಶ್ವಾಸ ಮೂಡಿಲ್ಲ. ಏನಾದರೂ ಅಡ್ಡ ಪರಿಣಾಮ ಉಂಟಾದರೆ ಅಂತಾ ಅನೇಕರು ಲಸಿಕೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ.
ಜನರಲ್ಲಿ ಈ ಭಯವನ್ನ ಹೋಗಲಾಡಿಸುವ ಸಲುವಾಗಿ ದೇಶದ ನಾಯಕರು ವಿವಿಧ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಅನೇಕ ದೇಶಗಳಲ್ಲಿ ದೇಶದ ಪ್ರಧಾನಿ, ಅಧ್ಯಕ್ಷರೇ ಕೊರೊನಾ ಲಸಿಕೆಯನ್ನ ಮೊದಲು ತೆಗೆದುಕೊಂಡಿದ್ದಾರೆ.
ಆದರೆ ಮಾಸ್ಕೋದಲ್ಲಿ ಮಾತ್ರ ಜನರನ್ನ ಕೊರೊನಾ ಲಸಿಕೆಗಳನ್ನ ಸೆಳೆಯಲು ಹೊಸ ಪ್ಲಾನ್ ಒಂದನ್ನ ರೂಪಿಸಲಾಗಿದೆ. ಕೇವಲ 38 ಪ್ರತಿಶತ ರಷ್ಯಾದ ಜನತೆ ಲಸಿಕೆ ತೆಗೆದುಕೊಳ್ಳಲು ಸಿದ್ಧರಿರೋದ್ರಿಂದ ಜನರನ್ನ ಲಸಿಕೆಯತ್ತ ಸೆಳೆಯಲು ಐಸ್ ಕ್ರೀಂನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ದೇಶದಲ್ಲಿದೆ ಇನ್ನೂ 1,48,609 ಕೋವಿಡ್ ಸಕ್ರಿಯ ಪ್ರಕರಣ – ಒಂದೇ ದಿನದಲ್ಲಿ 11 ಸಾವಿರಕ್ಕೂ ಅಧಿಕ ಕೇಸ್ ಗಳು ಪತ್ತೆ
ಸ್ಪುಟ್ನಿಕ್ ವಿ ಲಸಿಕೆ ಅತಿಯಾದ ಪೂರೈಕೆ ಇರುವ ಪ್ರದೇಶಗಳಲ್ಲಿ ಮಾಸ್ಕೋ ಕೂಡ ಒಂದು. ಆದರೆ ಅನೇಕರು ವ್ಯಾಕ್ಸಿನೇಷನ್ ಡ್ರೈವ್ನಿಂದ ಹೊರಗುಳಿಯುತ್ತಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆ ಈ ಉಚಿತ ಐಸ್ಕ್ರೀಂ ಪ್ಲಾನ್ ಮಾಡಲಾಗಿದೆ.
ರೆಡ್ ಸ್ಕ್ವೇರ್ ಮಾಲ್ನಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐಸ್ಕ್ರೀಂ ಆಫರ್ ಬಳಿಕ ಇದೀಗ ಜನರ ಸಂಖ್ಯೆ ಏರಿಕೆಯಾಗ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.