alex Certify ಪಂದ್ಯದ ವೇಳೆ ಮಾಜಿ ಪ್ರಿಯಕರನೊಂದಿಗೆ ಕೈಕುಲುಕಲು ನಿರಾಕರಿಸಿದ ಆಟಗಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂದ್ಯದ ವೇಳೆ ಮಾಜಿ ಪ್ರಿಯಕರನೊಂದಿಗೆ ಕೈಕುಲುಕಲು ನಿರಾಕರಿಸಿದ ಆಟಗಾತಿ

ಇಂಗ್ಲೆಂಡ್‌ನಲ್ಲಿ ಹಮ್ಮಿಕೊಳ್ಳಲಾದ ಸ್ನೂಕರ್‌ ಆಟವೊಂದರ ವಿಡಿಯೋ ವೈರಲ್‌ ಆಗಿದೆ. ’ಮಾಜಿಗಳ ಕಾದಾಟ’ ಎಂದು ಬಣ್ಣಿಸಲಾದ ಈ ಆಟವು ರೆಯಾನ್ನೆ ಎವಾನ್ಸ್‌ ಮತ್ತು ಮಾರ್ಕ್ ಅಲೆನ್ ಎಂಬ ಆಟಗಾರರ ನಡುವೆ ನಡೆದಿದೆ.

ಬ್ರಿಟಿಷ್‌ ಓಪನ್ ಸ್ನೂಕರ್‌ ಕೂಟದ ಈ ಪಂದ್ಯದಲ್ಲಿ ಇಬ್ಬರೂ ಎದುರಾಳಿಗಳು ಭಾರೀ ಪೈಪೋಟಿ ತೋರಿದ್ದಾರೆ. ಇದೇ ವೇಳೆ, ಪ್ರತಿ ಮ್ಯಾಚ್‌ಗೂ ಮುನ್ನ ಕೈಕುಲುಕುತ್ತಿದ್ದ ಆಟಗಾರರು ಕೋವಿಡ್‌ ನಿಂದಾಗಿ ಮುಷ್ಟಿಯ ಬಂಪ್ ನೀಡುವುದಕ್ಕೆ ಚಾಲನೆ ಕೊಟ್ಟಿದ್ದಾರೆ.

ಯುಎಇಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೊಂದು ಮಹತ್ವದ ಮಾಹಿತಿ

ಈ ಪಂದ್ಯದಲ್ಲಿ ಮ್ಯಾಚ್‌ ಒಂದರ ಆರಂಭಕ್ಕೂ ಮುನ್ನ ತಮಗೆ ಬಂಪ್ ನೀಡಲು ಬಂದ ಅಲೆನ್‌ಗೆ ಎವಾನ್ಸ್‌ ಕ್ಯಾರೇ ಎನ್ನದೇ ಇರುವ ಮೂಲಕ ಸದ್ದು ಮಾಡಿದ್ದಾರೆ. ಈ ಕಹಿ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕ್ರೀಡಾ ಪತ್ರಕರ್ತ ರಾಬ್ ಮೌಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ಸುದೀರ್ಘಾವಧಿಗೆ ರಿಲೇಷನ್‌ ಶಿಪ್‌ನಲ್ಲಿದ್ದ ಇಬ್ಬರೂ ಆಟಗಾರರ ನಡುವಿನ ಸಂಬಂಧ 2008ರಲ್ಲಿ ಮುರಿದುಬಿದ್ದಿದೆ. ಇಬ್ಬರಿಗೂ 14 ವರ್ಷದ ಮಗಳಿದ್ದಾಳೆ. ಅವರಿಬ್ಬರ ಈಗಿನ ಸಂಬಂಧ ಹೇಗಿದೆ ಎಂದು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...