alex Certify ಈರುಳ್ಳಿ ಕಟು ವಾಸನೆ ಕಾರಣ 175 ಪ್ರಯಾಣಿಕರಿದ್ದ ಶಾರ್ಜಾ ವಿಮಾನ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಕಟು ವಾಸನೆ ಕಾರಣ 175 ಪ್ರಯಾಣಿಕರಿದ್ದ ಶಾರ್ಜಾ ವಿಮಾನ ವಾಪಸ್

ಕೊಚ್ಚಿ: ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದೊಳಗೆ ಕಟು ಮತ್ತು ಸುಡುವ ವಾಸನೆಯ ಕಾರಣ ಶಾರ್ಜಾಕ್ಕೆ ಹೋಗುತ್ತಿದ್ದ ಸುಮಾರು 175 ಪ್ರಯಾಣಿಕರನ್ನು ಇಲ್ಲಿಂದ ಟೇಕ್ ಆಫ್ ಆದ ನಂತರ ಹಿಂತಿರುಗಿಸಲಾಗಿದೆ.

ವಿಮಾನದ ಕಾರ್ಗೋ ಹೋಲ್ಡ್ ಪ್ರದೇಶದಲ್ಲಿದ್ದ ಈರುಳ್ಳಿಯ ಬಾಕ್ಸ್ ಬಹುಶಃ ಇದಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

ಆಗಸ್ಟ್ 2 ರಂದು ರಾತ್ರಿ ಕೊಚ್ಚಿಯಿಂದ ಟೇಕ್ ಆಫ್ ಆದ ಶಾರ್ಜಾಕ್ಕೆ ಹೋಗುವ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದಲ್ಲಿ(IX 411) ಪ್ರಯಾಣಿಕರಲ್ಲಿ ಒಬ್ಬರು, ವಿಮಾನದೊಳಗೆ ಏನೋ ಸುಡುವ ವಾಸನೆಯ ಬಗ್ಗೆ ದೂರು ನೀಡಿದರು. ನಂತರ, ಇನ್ನೂ ಕೆಲವು ಪ್ರಯಾಣಿಕರು ಸೇರಿಕೊಂಡರು. ಈಗಷ್ಟೇ ಹೊರಟಿದ್ದ ವಿಮಾನದಲ್ಲಿ ಸ್ವಲ್ಪ ಕಟುವಾದ ವಾಸನೆ ಇದೆ ಎಂದು ತಿಳಿಸಿದ್ದಾರೆ.

ಬಳಿಕ ಬಲವಂತವಾಗಿ ತಿರುವು ಪಡೆದು ಕೊಚ್ಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(CIAL) ನಲ್ಲಿ ಮುನ್ನೆಚ್ಚರಿಕೆಯಾಗಿ ವಿಮಾನ ಲ್ಯಾಂಡಿಂಗ್ ಮಾಡಲಾಗಿದೆ. ಇಂಜಿನಿಯರಿಂಗ್ ತಂಡವು ವಿಮಾನವನ್ನು ಪರಿಶೀಲಿಸಿದೆ. ಹೊಗೆ ಅಥವಾ ತಾಂತ್ರಿಕ ಸಮಸ್ಯೆಗಳ ಯಾವುದೇ ಪುರಾವೆ ಕಂಡು ಬಂದಿಲ್ಲ. ವಿಮಾನದಲ್ಲಿ ಸಾಗಿಸುವ ಈರುಳ್ಳಿ ಅಥವಾ ತರಕಾರಿಗಳು ವಾಸನೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ವಿಮಾನದೊಳಗೆ ದುರ್ವಾಸನೆ ಕಾಣಿಸಿಕೊಂಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹಿಂದೆ ಸರಿಯಲು ನಿರ್ಧರಿಸಲಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಜಲನಾಡನ್ ಮಾತನಾಡಿ, ಪ್ರಯಾಣಿಕರಲ್ಲಿ ಅನಿಶ್ಚಿತತೆ ಮತ್ತು ಗೊಂದಲವಿತ್ತು, ಆದರೆ ವಿಮಾನವು ಸುರಕ್ಷಿತವಾಗಿ ಇಳಿಯಿತು ಎಂದು ತಿಳಿಸಿದ್ದಾರೆ.

ಏರ್ ಇಂಡಿಯಾ ಎಕ್ಸ್‌ ಪ್ರೆಸ್ ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿದ್ದು, ಬೆಳಿಗ್ಗೆ 5.14 ಕ್ಕೆ ಹೊರಡುವ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಿದೆ. ಏರ್‌ಲೈನ್‌ನ ಕಾರ್ಗೋ ಹೋಲ್ಡ್ ಪ್ರದೇಶದಲ್ಲಿ ಇರಿಸಲಾಗಿರುವ ಈರುಳ್ಳಿ ಅಥವಾ ತರಕಾರಿಗಳಿಂದ ವಾಸನೆ ಹೊರಹೊಮ್ಮಿರಬಹುದು. ಮಧ್ಯಪ್ರಾಚ್ಯ-ಬೌಂಡ್ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ಏರ್‌ಲೈನ್ ತನ್ನ ಸರಕು ಸಾಗಣೆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಸಾಗಿಸುತ್ತದೆ, ಇದು ಆದಾಯದ ಮೂಲವಾಗಿದೆ. ನಾವು ಪ್ರಯಾಣಿಕರನ್ನು ಒಯ್ಯುವುದು ಮಾತ್ರವಲ್ಲ, ನಮ್ಮ ರೈತರ ಉತ್ಪನ್ನಗಳನ್ನು ವಿಶೇಷವಾಗಿ ಗಲ್ಫ್ ದೇಶಗಳಿಗೆ ಸಾಗಿಸುತ್ತೇವೆ ಎಂದು ಏರ್ ಲೈನ್ಸ್ ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...