alex Certify ಪೋಷಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ‘ಚಿನ್ನ’ದ ಹುಡುಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ‘ಚಿನ್ನ’ದ ಹುಡುಗ..!

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಮುಡಿಗೆ ಚಿನ್ನದ ಪದಕವನ್ನು ಅರ್ಪಿಸಿದ್ದ ನೀರಜ್​ ಚೋಪ್ರಾ ಇಂದು ತಮ್ಮ ಪುಟ್ಟ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ವಿಮಾನದಲ್ಲಿ ತನ್ನ ಪೋಷಕರನ್ನು ಕರೆದುಕೊಂಡು ಹೋಗಬೇಕೆಂಬ ಆಸೆಯನ್ನು ನೀರಜ್​ ಇಂದು ತೀರಿಸಿಕೊಂಡಿದ್ದಾರೆ.

23 ವರ್ಷದ ಜಾವೆಲಿನ್​ ಎಸೆತಗಾರ ನೀರಜ್​​ ಟ್ವಿಟರ್​ನಲ್ಲಿ ಈ ಹೃದಯಸ್ಪರ್ಶಿ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ‌

ಪೋಷಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕು ಎಂಬ ನನ್ನ ಸಣ್ಣ ಕನಸೊಂದು ಇಂದು ನನಸಾಗಿದೆ ಎಂದು ನೀರಜ್​​ ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ನೀರಜ್​ ಚೋಪ್ರಾ ಈ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದಂತೆಯೇ ಕಮೆಂಟ್​ಗಳ ಸುರಿಮಳೆಯೇ ಹರಿದಿದೆ

ನೀರಜ್​ ಚೋಪ್ರಾ 87.58 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಇದು ಒಲಿಂಪಿಕ್​ನ ಅಥ್ಲೆಟಿಕ್​ ವಿಭಾಗದಲ್ಲಿ ಭಾರತಕ್ಕೆ ದೊರಕಿದೆ ಮೊದಲ ಸ್ವರ್ಣ ಗೌರವವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...