ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಮುಡಿಗೆ ಚಿನ್ನದ ಪದಕವನ್ನು ಅರ್ಪಿಸಿದ್ದ ನೀರಜ್ ಚೋಪ್ರಾ ಇಂದು ತಮ್ಮ ಪುಟ್ಟ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.
ವಿಮಾನದಲ್ಲಿ ತನ್ನ ಪೋಷಕರನ್ನು ಕರೆದುಕೊಂಡು ಹೋಗಬೇಕೆಂಬ ಆಸೆಯನ್ನು ನೀರಜ್ ಇಂದು ತೀರಿಸಿಕೊಂಡಿದ್ದಾರೆ.
23 ವರ್ಷದ ಜಾವೆಲಿನ್ ಎಸೆತಗಾರ ನೀರಜ್ ಟ್ವಿಟರ್ನಲ್ಲಿ ಈ ಹೃದಯಸ್ಪರ್ಶಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಪೋಷಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕು ಎಂಬ ನನ್ನ ಸಣ್ಣ ಕನಸೊಂದು ಇಂದು ನನಸಾಗಿದೆ ಎಂದು ನೀರಜ್ ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ನೀರಜ್ ಚೋಪ್ರಾ ಈ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಕಮೆಂಟ್ಗಳ ಸುರಿಮಳೆಯೇ ಹರಿದಿದೆ
ನೀರಜ್ ಚೋಪ್ರಾ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಇದು ಒಲಿಂಪಿಕ್ನ ಅಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ದೊರಕಿದೆ ಮೊದಲ ಸ್ವರ್ಣ ಗೌರವವಾಗಿದೆ.