alex Certify ವೇಗದ ನಡಿಗೆ ಮತ್ತು ಜಾಗಿಂಗ್‌ಗಿಂತಲೂ ಹೆಚ್ಚು ಪ್ರಯೋಜನಕಾರಿ ಸ್ಲೋ ರನ್ನಿಂಗ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗದ ನಡಿಗೆ ಮತ್ತು ಜಾಗಿಂಗ್‌ಗಿಂತಲೂ ಹೆಚ್ಚು ಪ್ರಯೋಜನಕಾರಿ ಸ್ಲೋ ರನ್ನಿಂಗ್‌

ರನ್ನಿಂಗ್‌ ನಮ್ಮನ್ನು ಆರೋಗ್ಯವಾಗಿಡುತ್ತದೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬಯಸುವವರು ಪ್ರತಿದಿನ ತಪ್ಪದೇ ರನ್ನಿಂಗ್‌ ಮಾಡುತ್ತಾರೆ. ಕೆಲವರು ವೇಗವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ, ಇನ್ನು ಸ್ಲೋ ರನ್ನಿಂಗ್‌ ಮಾಡುತ್ತಾರೆ. ಎರಡೂ ವಿಧಾನಗಳಲ್ಲಿ ಸಾಕಷ್ಟು ಅನುಕೂಲಗಳಿವೆ.

ವಾಕಿಂಗ್, ರನ್ನಿಂಗ್, ಜಾಗಿಂಗ್ ಅಥವಾ ಜಿಮ್‌ನಲ್ಲಿ ವರ್ಕ್‌ಔಟ್‌ ಇವೆಲ್ಲವೂ ಫಿಟ್ನೆಸ್‌ಗೆ ಸಂಬಂಧಪಟ್ಟ ಚಟುವಟಿಕೆಗಳು. ಹೆಚ್ಚಿನ ಜನರು ಫಾಸ್ಟ್‌ ರನ್ನಿಂಗ್‌ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದರೆ ನಿಧಾನವಾಗಿ ಓಡುವುದು ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ.

ನಿಧಾನಗತಿಯಲ್ಲಿ ಓಡುವುದನ್ನು ಕಡಿಮೆ ತೀವ್ರತೆಯ (LISS) ಕಾರ್ಡಿಯೋ ಎಂದು ಪರಿಗಣಿಸಲಾಗುತ್ತದೆ. ದೀರ್ಘಕಾಲ ನಿಧಾನವಾಗಿ ಓಡುವುದು ಹೃದಯ ಬಡಿತವನ್ನು ವಿಪರೀತ ಹೆಚ್ಚಿಸುವುದಿಲ್ಲ. ಇದರಲ್ಲಿ ಉಸಿರುಗಟ್ಟದೆ ಮಾತನಾಡಬಲ್ಲ ವೇಗವನ್ನು ಕಾಯ್ದುಕೊಳ್ಳಬೇಕು. ಓಡಲು ಇದು ಹೆಚ್ಚು ಆರಾಮದಾಯಕ ಮಾರ್ಗವಾಗಿದೆ.

ನಿಧಾನಗತಿಯ ಓಟವು ಏರೋಬಿಕ್ ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ. ಹೆಚ್ಚಿನ ತೀವ್ರತೆಯ ವ್ಯಾಯಾಮಗಳಿಗಿಂತ ಭಿನ್ನವಾಗಿ  ನಿಧಾನಗತಿಯಲ್ಲಿ ಓಡುವುದು ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಇದು ಗಾಯದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಹೆಚ್ಚು ಒತ್ತಡವಿಲ್ಲದೆ ಕೀಲುಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಪ್ರತಿದಿನ ಒಮ್ಮೆ ಅಥವಾ ಅಥವಾ ಎರಡು ಅಲ್ಪಾವಧಿಗೆ ನಿಧಾನಗತಿಯಲ್ಲಿ ಓಡಬೇಕು. ಫಿಟ್ನೆಸ್ ಸುಧಾರಿಸಿದಂತೆ ರನ್ನಿಂಗ್ ಟೈಮ್‌ ಅನ್ನು ಕ್ರಮೇಣ ಹೆಚ್ಚಿಸಿ. ನಿಧಾನವಾಗಿ ಓಡುವುದರೊಂದಿಗೆ ಇತರ ವ್ಯಾಯಾಮಗಳನ್ನು ಮಾಡಿ. ಇದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು ಜೊತೆಗೆ ಫಿಟ್ನೆಸ್‌ ಕೂಡ ಕಾಪಾಡಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...