ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಬಗ್ಗೆ ಸಾಕಷ್ಟು ಹೇಳಲಾಗಿದೆ ಮತ್ತು ತಿಳಿಸಲಾಗುತ್ತದೆ. ಇದರ ಹೊರತಾಗಿಯೂ ಕೆಲವರು ಹೆಚ್ಚು ಹೆಚ್ಚು ಲೈಕ್ಸ್ ಪಡೆಯಲು ಹುಚ್ಚು ಸಾಹಸಕ್ಕೆ ಮುಂದಾಗಿ ತಮ್ಮ ಜೀವವನ್ನು ಮಾತ್ರವಲ್ಲದೇ ಅಮಾಯಕರ ಜೀವವನ್ನೂ ತೆಗೆಯುತ್ತಿರುವ ನಿದರ್ಶನಗಳಿವೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ.
ರಸ್ತೆಯ ಮೇಲೆ ಸ್ಕೇಟ್‌ಬೋರ್ಡ್ ಆಡುತ್ತಿರುವ ಯುವಕನ ವಿಡಿಯೋ ಇದಾಗಿದೆ. ಈತ ಅತಿ ವೇಗದಲ್ಲಿ ಸ್ಕೇಟಿಂಗ್ನಲ್ಲಿ ಸವಾರಿ ಮಾಡುತ್ತಿರುವುದನ್ನು ನೋಡಬಹುದು. ಆರಂಭದಲ್ಲಿ ಈತ ಎದುರಿಗೆ ಬರುವ ವಾಹನ, ಬೈಕ್ಗಳನ್ನು ತಪ್ಪಿಸಿಕೊಂಡು ರಸ್ತೆಯ ಮೇಲೆ ವೇಗದಲ್ಲಿ ಸವಾರಿ ಮಾಡಲು ಯಶಸ್ವಿಯಾಗುತ್ತಾನೆ. ಮೊದಲಿಗೆ ಎದುರಿಗಿನಿಂದ ಬಂದ ಟ್ರಕ್, ನಂತರ ಇನ್ನೊಂದು ಬೈಕ್ ಎಲ್ಲವನ್ನೂ ತಪ್ಪಿಸಿಕೊಂಡು ಹೋಗುತ್ತಾನೆ.
ಇದಾದ ಬಳಿಕ ಇನ್ನೊಂದು ಬೈಕ್ ಸವಾರ ತನ್ನ ಬೈಕ್ನಲ್ಲಿ ಭಾರಿ ಸಾಮಾನು ಹೊತ್ತು ಬರುತ್ತಿರುವಾಗ ಈ ಸ್ಕೇಟರ್ ಎದುರಿಗಿರುವ ಬೈಕ್ಗು ಗುದ್ದುತ್ತಾನೆ. ನಿಯಂತ್ರಣ ಕಳೆದುಕೊಂಡು ಬೈಕ್ ಸವಾರ ಬೀಳುತ್ತಾನೆ. ಸ್ಕೇಟಿಂಗ್‌ಗಾಗಿ ತಪ್ಪು ರಸ್ತೆಯನ್ನು ಆರಿಸಿಕೊಂಡದ್ದೂ ಅಲ್ಲದೇ ಬೈಕ್ ಸವಾರನ ಪ್ರಾಣಕ್ಕೆ ಸಂಚಕಾರ ತಂದಿದ್ದಾನೆ. ವಿಡಿಯೋ ನೋಡಿದರೆ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂಬುದು ತೋರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.