ಅಂಬರ್ಗಿಸ್ ಅಥವಾ ತಿಮಿಂಗಿಲದ ವಾಂತಿ ಎಂದು ಕರೆಯಲ್ಪಡುವ ಮೇಣದ ರೀತಿಯ ಕರಿಯ ವಸ್ತುವೊಂದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರು ಮಂದಿಯ ಗ್ಯಾಂಗ್ ನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ತೇಲುವ ಚಿನ್ನವೆಂದು ಕರೆಯಲ್ಪಡುವ ಅಂಬರ್ಗಿಸ್, ತಿಮಿಂಗಿಲದ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗಿ, ಘನೀಕರಣಗೊಂಡು ಮೇಣದ ರೂಪದಲ್ಲಿ ಸಾಗರದಲ್ಲಿ ತೇಲುತ್ತಿರುತತ್ತದೆ.
ಕೊರೊನಾ ಭಯಕ್ಕೆ ಹೆಚ್ಚೆಚ್ಚು ಕಷಾಯ ಕುಡಿದವರಿಗೆ ಕಾಡ್ತಿದೆ ಈ ಸಮಸ್ಯೆ…!
ದುಬಾರಿ ಸುಗಂಧ ದ್ರವಗಳ ಉತ್ಪಾದನೆಯಲ್ಲಿ ಈ ಅಂಬರ್ಗಿಸ್ ಅನ್ನು ಬಳಸಲಾಗುತ್ತದೆ. ಕೋಟ್ಯಂತರ ರೂಪಾಯಿ ಮೌಲ್ಯದ ಅಂಬರ್ಗಿಸ್ ಅನ್ನು ಶ್ರೀಲಂಕಾ, ಇಂಡೋನೇಷ್ಯಾ, ಬ್ರಿಟನ್ ಸೇರಿದಂತೆ ಅನೇಕ ದೇಶಗಳಿಗೆ ಕಳ್ಳಮಾರ್ಗದಲ್ಲಿ ಈ ಸರಕನ್ನು ಸಾಗಾಟ ಮಾಡಲಾಗುತ್ತದೆ ಎಂದು ತನಿಖೆ ಬಳಿಕ ತಿಳಿದುಬಂದಿದೆ.
ಲ್ಯಾಪ್ಸ್ ಆಗಿರುವ LIC ಪಾಲಿಸಿಗೆ ಮರುಜೀವ ತುಂಬುವುದು ಹೇಗೆ…? ನಿಮಗಿರಲಿ ಈ ಮಾಹಿತಿ
ಜಿಲ್ಲೆಯ ತಿರುಚೆಂದೂರು ಬಳಿ ಕಾರಿನಲ್ಲಿ ಈ ವಸ್ತುವನ್ನು ಸಾಗಿಸುತ್ತಿದ್ದ ವೇಳೆ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವನ್ಯಜೀವಿ ಸಂರಕ್ಷಣೆ ಕಾಯಿದೆ ಅಡಿ ಕ್ರಮ ತೆಗೆದುಕೊಳ್ಳಲಾಗಿದೆ.
ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ನಡೆದಿದ್ದ ಇಂಥದ್ದೇ ಘಟನೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದೇವನಂಪಟ್ಟಿಣಂ ಕಡಲತೀರದಲ್ಲಿ ಸಿಕ್ಕ 5.88 ಕೆಜಿ ಅಂಬರ್ಗಿಸ್ ಅನ್ನು ವಶಕ್ಕೆ ಪಡೆದಿದ್ದರು.