20 ವರ್ಷಗಳ ಹಿಂದೆ ಪಾಕಿಸ್ತಾನ ಪೋಷಿತ ಅಲ್-ಖೈದಾ ಉಗ್ರರು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದ ಮೇಲೆ ನಡೆಸಿದ ದಾಳಿಯ ಕ್ರೌರ್ಯ ಮರೆಯಾಗುವ ಲಕ್ಷ ಣಗಳೇ ಕಾಣುತ್ತಿಲ್ಲ.
ಒಂದಿಲ್ಲೊಂದು ಪ್ರಕರಣಗಳು ಈ ದಾಳಿಗೆ ಸಂಬಂಧಿತವಾಗಿ ಇಂದಿಗೂ ಜೀವಂತವಾಗಿವೆ. ಫೈರ್ ಕ್ಯಾಪ್ಟನ್ ಆಗಿದ್ದ ಬಿಲ್ಲಿ ಬುರ್ಕಿಸ್‌ಗೆ 2001ರ ಸೆ. 11ರಂದು ನ್ಯೂಯಾರ್ಕ್‌ನ ಡಬ್ಲುಟಿಸಿಯ 27ನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿರುವ ಬಗ್ಗೆ ದೂರು ಬಂದಿತ್ತು. ಕೂಡಲೇ ಅವರ ತಂಡ ಅಲ್ಲಿಗೆ ತಲುಪಿ ಅಗ್ನಿಶಾಮಕ ಕಾರ್ಯದ ಜತೆಗೆ ಜನರ ರಕ್ಷ ಣೆಗೆ ನಿಂತಿತ್ತು.
ಬಹುತೇಕ ಎಲ್ಲನಾಗರಿಕರನ್ನು ರಕ್ಷಿಸಿದ ಬಿಲ್ಲಿಗೆ ಮಾತ್ರ, ಅಗ್ನಿಜ್ವಾಲೆ ಹಾಗೂ ಕುಸಿಯುತ್ತಿದ್ದ ಕಟ್ಟಡದ ಅವಶೇಷಗಳಿಂದ ಹೊರಬರಲು ಆಗಲೇ ಇಲ್ಲ. ಆತ ಅಲ್ಲಿಯೇ ಸಮಾಧಿ ಆಗಬೇಕಾಯಿತು.
ಇಂಥ ಭಯಂಕರ ದಾಳಿಯ ಮುನ್ಸೂಚನೆ, ಸುಳಿವು ಹಾಗೂ ನಂತರದಲ್ಲಿ ಅಮೆರಿಕ ಸರಕಾರವು ಉಗ್ರರನ್ನು ಸದೆಬಡಿಯಲು ಎಡವಿದ ರೀತಿಯನ್ನು ಬಿಲ್ಲಿ ಅವರ ಸೋದರಿ ಎಲಿಜಬೆತ್ ಇಂದಿಗೂ ಗುವಾಂಟನಮೊ ಕೋರ್ಟ್‌ನಲ್ಲಿಪ್ರಶ್ನಿಸುತ್ತಿದ್ದಾರೆ. ಎಲಿಜಬೆತ್ ಗಂಡ ಪೌಲ್ ಅವರು ನಿವೃತ್ತ ಅಟಾರ್ನಿಯಾಗಿದ್ದು, ಬಿಲ್ಲಿಯ ಸಾವಿಗೆ ಯಾರು ಹೊಣೆ ಎಂದು ಇಂದಿಗೂ ಕೋರ್ಟ್‌ಗೆ ಪ್ರಶ್ನಿಸುತ್ತಲೇ ಇದ್ದಾರೆ.
ಏಕಾಏಕಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ಲು ಮಹಿಳೆ
ದಾಳಿ ನಡೆಸಿದ ಉಗ್ರರನ್ನು ಹೆಡೆಮುರಿ ಕಟ್ಟಿ ಕೋರ್ಟ್‌ನಲ್ಲಿ ಹಾಜರುಪಡಿಸುವುದು ಯಾವಾಗ ? ಅವರ ಅಪರಾಧಗಳಿಗೆ ಅವರು ಶಿಕ್ಷೆ ಅನುಭವಿಸುವುದು ಯಾವಾಗ ? ಇದರಿಂದ ಮೃತ ಜೀವಗಳಿಗೆ ಶಾಂತಿ ಸಿಗುವುದು ಯಾವಾಗ ? ಎಂಬ ಪ್ರಮುಖ ಪ್ರಶ್ನೆಗಳನ್ನು ಎಲಿಜಬೆತ್ ಅವರು ಕೋರ್ಟ್ ಮೂಲಕ ಅಮೆರಿಕ ಸರ್ಕಾರಕ್ಕೆ ಕೇಳಿದ್ದಾರೆ.