alex Certify ಪಕ್ಷಾಂತರಿಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ: ಸಿರಿಗೆರೆ ಶ್ರೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಾಂತರಿಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ: ಸಿರಿಗೆರೆ ಶ್ರೀ

ಚಿತ್ರದುರ್ಗ: ಪಕ್ಷಾಂತರಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ. ಕಾರ್ಯಕರ್ತರ ಅಸಮಾಧಾನ ಹೆಚ್ಚಾಗುತ್ತದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಸದ್ಧರ್ಮ ನ್ಯಾಯ ಪೀಠದಲ್ಲಿ ಮಾತನಾಡಿದ ಶ್ರೀಗಳು, ಪಕ್ಷಾಂತರಗಳಿಗೆ ಕಡಿವಾಣ ಬೀಳದೆ ರಾಜಕೀಯ ಶುದ್ಧೀಕರಣ ಮರೀಚಿಕೆಯಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಶುದ್ಧೀಕರಣ ಇಂದಿನ ಅಗತ್ಯವಾಗಿದೆ. ಇದಕ್ಕೆ ಬದ್ಧವಾಗಿರಲು ರಾಜಕಾರಣಿಗಳು ಮುಂದಾಗಬೇಕು. ಪಕ್ಷಾಂತರ ನಿಷೇಧ ಕಾಯ್ದೆ ಮಾರ್ಪಾಡು ಅಗತ್ಯವಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ವ್ಯಕ್ತಿ ಕೊನೆ ಪಕ್ಷ ಐದು ವರ್ಷ ಹೊಸ ಪಕ್ಷದಲ್ಲಿ ಸದಸ್ಯನಾಗಿರಬೇಕು, ಆತನಿಗೆ ಯಾವುದೇ ಅಧಿಕಾರ ದೊರೆಯಬಾರದು. ಹೀಗೆ ನಿಯಮ ರೂಪಿಸಿದರೆ ರಾಜಕಾರಣ ಒಂದಿಷ್ಟು ಹಿಡಿತಕ್ಕೆ ಬರುತ್ತದೆ. ರೆಸಾರ್ಟ್ ರಾಜಕಾರಣವೂ ಕೊನೆಯಾಗುತ್ತದೆ ಎಂದು ಹೇಳಿದ್ದಾರೆ.

ದಶಕಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತ ಮತ್ತು ಜಾತ್ಯತೀತ ರಾಜಕೀಯ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಿಂತಹ ಅಭ್ಯರ್ಥಿಗಳಿಗೆ ಮತ ಹಾಕಲು ಮನವಿ ಮಾಡಿದ್ದೆವು. ಆ ಪ್ರಯೋಗ ಯಶಸ್ವಿಯಾಗಿತ್ತು. ಆದರೆ, ಚುನಾವಣೆಯಲ್ಲಿ ಗೆದ್ದು ಬಂದ ಅಭ್ಯರ್ಥಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಲಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...