
ಜೆರುಸಲೆಂನ ಆಸ್ಪತ್ರೆಯೊಂದರ ಸಮೀಪದಲ್ಲಿ ಕಾರು ಪಾರ್ಕ್ ಮಾಡಲಾಗಿದ್ದ ಜಾಗದಲ್ಲಿ ಮಧ್ಯಾಹ್ನದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುತ್ತಿಗೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಶಾರಿ ಝೆಡೆಕ್ ಮೆಡಿಕಲ್ ಕೇಂದ್ರದ ಸಿಸಿ ಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಈ ಸಿಂಕ್ಹೋಲ್ ಗಾತ್ರ ದೊಡ್ಡದಾಗುತ್ತಲೇ ಇದೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯ ಮುಂದುವರಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕೊರೊನಾ ಲಸಿಕೆ ಪಡೆಯುವವರಿಗೆ ಇಲ್ಲಿ ಸಿಗ್ತಿದೆ ಬಂಪರ್ ಆಫರ್…!
ಇಲ್ಲೇ ಸಮೀಪದಲ್ಲಿ ಕಾಲುವೆಯೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಘಟನೆ ಬಳಿಕ ಕಾಲುವೆ ಕೂಡ ಭಾಗಶಃ ಕುಸಿದಿದೆ ಎನ್ನಲಾಗಿದೆ. ಆಸ್ಪತ್ರೆಯು ಕಳೆದ ಕೆಲ ದಿನಗಳ ಹಿಂದಷ್ಟೇ ಈ ಪಾರ್ಕಿಂಗ್ ಲಾಟ್ನ್ನು ಆರಂಭಿಸಿತ್ತು.