alex Certify ದಂಗಾಗಿಸುತ್ತೆ ʼಸಿಂಗಲ್ ಪಾರ್ಕಿಂಗ್‌ʼ ಜಾಗ‌ ಮಾರಾಟವಾದ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ʼಸಿಂಗಲ್ ಪಾರ್ಕಿಂಗ್‌ʼ ಜಾಗ‌ ಮಾರಾಟವಾದ ಬೆಲೆ…!

ಇಂಗ್ಲೆಂಡ್ ನ ಬಾತ್ ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಜಾಗವನ್ನು ಬರೋಬ್ಬರಿ 1,15,000 ಪೌಂಡ್ ಅಂದ್ರೆ ಸುಮಾರು 1.16 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಇದರ ವಿಶೇಷತೆ ಏನು ಗೊತ್ತಾ..? ಈ ಪಾರ್ಕಿಂಗ್ ಜಾಗವನ್ನು ಬಹಳ ಅಪರೂಪ ಮತ್ತು ಉತ್ತಮ ಎಂದು ವಿವರಿಸಲಾಗಿದೆ.

ಸರ್ಕಸ್ ಮ್ಯೂಸ್ ಬಳಿ ಸುರಕ್ಷಿತವಾಗಿರುವ ಅಂಡರ್ ಗ್ರೌಂಡ್ ನಲ್ಲಿ ಈ ಪಾರ್ಕಿಂಗ್ ಜಾಗವನ್ನು ನಿರ್ಮಿಸಲಾಗಿದ್ದು, ವಿದ್ಯುತ್ ವ್ಯವಸ್ಥೆಯೂ ಇದೆ. ಇನ್ನು ಬಾತ್ ನಗರದ ಹೃದಯಭಾಗದಲ್ಲಿರುವ ಈ ಪಾರ್ಕಿಂಗ್ ಜಾಗಕ್ಕೆ ಅಂಗಡಿಗಳು, ರೆಸ್ಟೋರೆಂಟ್ ಗಳೂ ಕೂಡ ಬಹಳ ಹತ್ತಿರದಲ್ಲೇ ಇವೆ. ಆದಾಗ್ಯೂ, ಇದರ ಅತಿಯಾದ ಬೆಲೆ ನೆಟ್ಟಿಗರಿಗೆ ಆಶ್ಚರ್ಯವನ್ನುಂಟುಮಾಡಿದೆ.

BIG NEWS: ಡ್ರಗ್ಸ್ ಪ್ರಕರಣ; ಆಂಕರ್ ಅನುಶ್ರೀ ಹೆಸರು ಕೈಬಿಟ್ಟಿದ್ದೇಕೆ…? ಕಾರಣ ಬಿಚ್ಚಿಟ್ಟ ಸಚಿವ ಮಾಧುಸ್ವಾಮಿ

ಆದರೆ, ಇದು ಈ ವರ್ಷ ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಪಾರ್ಕಿಂಗ್ ಜಾಗ ಇದಾಗಿಲ್ಲ. ಈ ವರ್ಷದ ಜೂನ್ ತಿಂಗಳಿನಲ್ಲಿ ಒಂದೇ ಪಾರ್ಕಿಂಗ್ ಜಾಗವನ್ನು 10 ದಶಲಕ್ಷ ಹಾಂಗ್ ಕಾಂಗ್ ಡಾಲರ್ ( ಸುಮಾರು 9.43 ಕೋಟಿ ರೂ.) ಗಳಿಗೆ ಮಾರಾಟ ಮಾಡಲಾಗಿತ್ತು. ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಪಾರ್ಕಿಂಗ್ ಸ್ಥಳವೆಂದು ಇದನ್ನು ಪರಿಗಣಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...