alex Certify ಕೊರೊನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ ಈ ಮೆಡಿಸಿನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ ಈ ಮೆಡಿಸಿನ್​..!

ಕಳೆದು ಎರಡು ವಾರಗಳಲ್ಲಿ ಪುಣೆಯ 4 ಆಸ್ಪತ್ರೆಗಳಲ್ಲಿ ಮೊನೊಕ್ಲೋನಲ್​ ಆಂಟಿಬಾಡೀಸ್​ ಸಿಂಗಲ್​ ಡೋಸ್​ ಕಾಕ್​​ಟೇಲ್​ ಕೋವಿಡ್​​ ಮೆಡಿಸಿನ್​ ಸ್ವೀಕರಿಸಿದ ಸೌಮ್ಯದಿಂದ ಮಧ್ಯಮ ಪ್ರಮಾಣದ ಲಕ್ಷಣಗಳನ್ನ ಹೊಂದಿದ್ದ ಆರು ಮಂದಿ ಸೋಂಕಿತರು ವೇಗವಾಗಿ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.‌

ಮೊನೊಕ್ಲೋನಲ್​ ಆಂಟಿಬಾಡಿಗಳು ಪ್ರಯೋಗಾಲಯದಲ್ಲಿ ತಯಾರಿಸಿದ ಪ್ರೋಟಿನ್​ಗಳಾಗಿದ್ದು ದೇಹದಲ್ಲಿ ರೋಗ ನಿರೋಧಕ ಶಕ್ತಿಯಂತೆ ವರ್ತಿಸಿ ವೈರಾಣುಗಳ ವಿರುದ್ಧ ಹೋರಾಡುತ್ತದೆ.

ಇದರಿಂದ ರೋಗಿಗಳು ಬಹುಬೇಗನೆ ಸುಧಾರಿಸಿಕೊಳ್ತಾರೆ. ಇದು ಸೌಮ್ಯದಿಂದ ಮಧ್ಯಮ ಲಕ್ಷಣ ಹೊಂದಿದ ರೋಗಿಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತೆ. ಸಿಂಗಲ್​ ಡೋಸ್​ ಥೆರಪಿಗೆ 60 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತೆ.

ನಾವು ಇಬ್ಬರು ಸೋಂಕಿತರಿಗೆ ಮೊನೋಕ್ಲೋನಲ್​ ಆಂಟಿಬಾಡಿ ಕಾಕ್​ಟೇಲ್​ ಥೆರಪಿಯನ್ನ ನೀಡಿದ್ದೆವು. ಇವರಿಬ್ಬರ ದೇಹವು ಈ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದೆ. ಹಾಗೂ ಇಬ್ಬರೂ ಕೊರೊನಾದಿಂದ ಶೀಘ್ರವೇ ಗುಣಮುಖರಾಗಿದ್ದಾರೆ ಎಂದು ತಜ್ಞ ವೈದ್ಯ ಮಹೇಶ್​ ಲಾಖೆ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...