ಸಿಖ್ಖರ ಪವಿತ್ರ ಗ್ರಂಥಕ್ಕೆ ಅವಮಾನ ಎಸಗಿದ ಎಂಬ ಆರೋಪದ ಮೇರೆಗೆ ನಿಹಾಂಗ ಸಿಖ್ಖರ ಪಡೆಯಿಂದ ಬರ್ಬರ ಹತ್ಯೆಗೀಡಾದ ವ್ಯಕ್ತಿ ಲಖಬೀರ್ ಸಿಂಗ್ ದಿಲ್ಲಿಗೆ ಬಂದಾಗ ಆತನ ಜೇಬಿನಲ್ಲಿದ್ದದ್ದು ಕೇವಲ 50 ರೂ. ಮಾತ್ರವೇ ಅಂತೆ!
ಹೌದು, ಪಂಜಾಬಿನ ಛೀಮಾ ಕಲನ್ ಗ್ರಾಮದಿಂದ ಅ.6ನೇ ತಾರೀಖು ಲಖಬೀರ್ ದಿಲ್ಲಿಯ ರೈತ ಪ್ರತಿಭಟನಾ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ದಿಲ್ಲಿಗೆ ಹೋಗುವ ಬಗ್ಗೆ ಗೌಪ್ಯವಾಗಿಟ್ಟಿದ್ದ ಲಖಬೀರ್ ಅವರು 15 ಕಿ.ಮೀ. ದೂರದ ಛಬ್ಬಲ್ ಎಂಬ ಪಟ್ಟಣಕ್ಕೆ ಹೊರಟಿದ್ದರು. ಆಗ ತನ್ನಿಂದ 50 ರೂ. ಖರ್ಚಿಗಾಗಿ ಪಡೆದಿದ್ದರು ಎಂದು ಲಖಬೀರ್ ಸೋದರಿ ರಾಜ್ ಕೌರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
BIG NEWS: JDS ನಿಂದ ಅವಕಾಶವಾದಿ ರಾಜಕಾರಣ; HDK ಆರೋಪಕ್ಕೆ ತಿರುಗೇಟು ನೀಡಿದ ಸಲೀಂ ಅಹ್ಮದ್
ಅ.6ರ ಬಳಿಕ ಲಖಬೀರ್ ನಾಪತ್ತೆಯಾಗಿದ್ದರು. ಅವರು ದಿಲ್ಲಿಗೆ ತೆರಳಿದ್ದ ಬಗ್ಗೆ ನಮಗೆ ಗೊತ್ತೇ ಇಲ್ಲ. ಶುಕ್ರವಾರದಂದು ಅವರ ಹತ್ಯೆಯ ಸುದ್ದಿ ಕೇಳಿದಾಗಲೇ ಅವರು ಸಿಂಘು ಗಡಿಯಲ್ಲಿದ್ದರು ಎನ್ನುವುದು ಗೊತ್ತಾಯಿತು. ಕೇವಲ 50 ರೂ. ಪಡೆದು ಅಲ್ಲಿಗೆ ಹೇಗೆ ಹೋದರು ಎನ್ನುವುದು ತಿಳಿದಿಲ್ಲ ಎಂದು ರಾಜ್ ಕೌರ್ ಆತಂಕ ವ್ಯಕ್ತಪಡಿಸಿದ್ದಾರೆ.
8, 10 ಹಾಗೂ 12 ವರ್ಷದ ಮೂರು ಮಕ್ಕಳ ತಂದೆಯಾದ ಲಖಬೀರ್ ಅವರಿಗೆ ಒಬ್ಬ ಪತ್ನಿ ಇದ್ದಾರೆ. ಮಾವ ಬಲದೇವ್ ಸಿಂಗ್ ಅವರ ಪ್ರಕಾರ ಲಖಬೀರ್ ಮಾದಕ ವಸ್ತುಗಳ ದಾಸನಾಗಿದ್ದು, 5-6 ವರ್ಷಗಳ ಮುನ್ನವೇ ಸಂಸಾರದ ಜವಾಬ್ದಾರಿ ತೊರೆದು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದ ಎನ್ನಲಾಗಿದೆ. ಬಹಳ ಸಣ್ಣ ವಯಸ್ಸಿನಲ್ಲೇ ಲಖಬೀರ್ ಪೋಷಕರನ್ನು ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ. ಹರ್ನಾಮ್ ಸಿಂಗ್ ಎಂಬ ಸೋದರ ಮಾವ ಲಖಬೀರ್‌ನನ್ನು ದತ್ತು ಪಡೆದಿದ್ದರಂತೆ.