alex Certify ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?

ಜನಪ್ರಿಯ ಗಾಯಕ ಸೋನು ನಿಗಂ ಕಿಯಾದ ಕಾರ್ನಿವಾಲ್ ಎಂಪಿವಿ ವಾಹನವನ್ನು ಖರೀದಿ ಮಾಡಿದ್ದಾರೆ. ಮುಂಬೈಯ ಕಾರ್‌ ಡೀಲರ್‌ ಶೋರೂಂ ಒಂದರಲ್ಲಿ ಕಾರನ್ನು ಖರೀದಿ ಮಾಡುತ್ತಿರುವ ಸೋನುರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಿಯಾದ ಫ್ಲಾಗ್‌ಶಿಪ್ ಹೊಂದಿರುವ ಈ ಕಾರು 24.95 ಲಕ್ಷ ರೂ.ಗಳ ಎಕ್ಸ್‌ಶೋರೂಂ ಬೆಲೆಯಲ್ಲಿ ದೊರಕುತ್ತದೆ.

ಕಿಯಾ ಕಾರ್ನಿವಾಲ್‌ನ ಸುಧಾರಿತ ಅವತಾರವಾದ ಈ ವಾಹನದಲ್ಲಿ ಕಿಯಾದ ಹೊಸ ಲೋಗೋ ಇದ್ದು, ಮರು ಹೊಂದಿಸಲಾದ ಟ್ರಿಮ್ ಲೈನ್‌-ಅಪ್‌ಗಳೊಂದಿಗೆ ಲಿಮೋಯುಸಿನ್ ಮತ್ತು ಲಿಮೋಯುಸಿನ್‌+, ಪ್ರೆಸ್ಟೀಜ್ ಮತ್ತು ಪ್ರೀಮಿಯಂ ವರ್ಶನ್‌ಗಳಲ್ಲಿ ಇತರೆ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

11 ನಾಗರಿಕರ ಹತ್ಯೆ ನಂತರ ನಾಗಾಲ್ಯಾಂಡ್ ನಲ್ಲಿ ಉದ್ವಿಗ್ನ ಸ್ಥಿತಿ, ಭದ್ರತಾ ಪಡೆ ವಾಹನಗಳಿಗೆ ಬೆಂಕಿ

ಕಿಯಾ ಕಾರ್ನಿವಾಲ್‌ನ ಹೊಸ ಲಿಮೋಯುಸಿನ್ ವರ್ಶನ್‌ಗೆ ವಿಐಪಿ ಪ್ರೀಮಿಯಂ ಲೆದರ್‌ ಆಸನಗಳು, ಎರಡನೇ ಸಾಲಿನ ಆಸನಗಳಲ್ಲಿ ಕಾಲುಗಳನ್ನು ಇಡಲು 20.32 ಸೆಂಮೀನಷ್ಟು ಜಾಗ, ಎವಿಎನ್‌ಟಿ ಹಾಗೂ ಓಟಿಎ ಮ್ಯಾಪ್‌ ಅಪ್ಡೇಟ್‌ಗಳು ಹಾಗೂ ಯುವಿಓ ಸಪೋರ್ಟ್‌ಗಳೊಂದಿಗೆ ಇಸಿಎಂ ಕನ್ನಡಿಯನ್ನು ನೀಡಲಾಗಿದೆ. ಇದರೊಂದಿಗೆ ಹಿಂಬದಿ ಸೀಟಿಗೆ 10.1” ಮನರಂಜನಾ ವ್ಯವಸ್ಥೆ ನೀಡಲಾಗಿದೆ. ಸ್ಮಾರ್ಟ್ ಪ್ಯೂರ್‌ ಗಾಳಿ ಶುದ್ಧೀಕರಣ ವ್ಯವಸ್ಥೆ ಮತ್ತೊಂದು ಆಕರ್ಷಕ ವ್ಯವಸ್ಥೆಯಾಗಿದೆ.

ಲಿಮೋ+ ಅವತಾರದ ವಾಹನದಲ್ಲಿ ಹರ್ಮಾನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್‌ ಧ್ವನಿ ವ್ಯವಸ್ಥೆ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10ವೇ ಪವರ್‌ ಡ್ರೈವರ್‌ ಸೀಟು, ಡ್ರೈವರ್‌ ಸೀಟಿಗೆ ವೆಂಟಿಲೇಷನ್, ಲೆದರ್‌ನಿಂದ ಸುತ್ತಲ್ಪಟ್ಟ ಸ್ಟ್ರಿಯರಿಂಗ್ ಗಾಲಿ ಮತ್ತು ಗೇರ್‌ ನಾಬ್‌, ಪ್ರೀಮಿಯಂ ಮರದ ವಿನ್ಯಾಸ, 25.65 ಸೆಂಮೀ (10.1”) ಹಿಂಬದಿ ಸೀಟಿನ ಮನರಂಜನಾ ವ್ಯವಸ್ಥೆ ನೀಡಲಾಗಿದೆ.

ಮೇಲ್ಕಂಡ ಎಲ್ಲಾ ಕಾರುಗಳಿಗೆ 18” ಕ್ರಿಸ್ಟಲ್ ಕಟ್ ಬಹುಲೋಹದ ಚಕ್ರಗಳನ್ನು ಅಳವಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...