ಸಿಂಗಾಪುರದ ರೈಲು ವಸತಿ ಬ್ಲಾಕ್‌ಗಳ ಮೂಲಕ ಹಾದು ಹೋಗುವಾಗ ಸ್ವಯಂಚಾಲಿತವಾಗಿ ಅದರ ಕಿಟಕಿಗಳು ಬ್ಲರ್ ಆಗುವ ವಿಶಿಷ್ಟ ತಂತ್ರಜ್ಞಾನ ರೂಪಿಸಲಾಗಿದೆ. ಇದೀಗ ಭಾರಿ ವೈರಲ್ ಆಗಿದೆ. ಇದಕ್ಕೆ ಕಾರಣ ಮನೆಗಳ ಜನರ ಖಾಸಗಿತನಕ್ಕೆ ಧಕ್ಕೆ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ.
ರೈಲು ಸಿಂಗಾಪುರದ ಬುಕಿಟ್ ಪಂಜಾಂಗ್ ಲೈಟ್ ರೈಲ್ ಟ್ರಾನ್ಸಿಟ್ (LRT) ಎಂದು ಕರೆಯಲಾಗುತ್ತದೆ. ಇದು ದೇಶದ ಮೊದಲ ಲಘು ರೈಲು, ಈ ತಂತ್ರಜ್ಞಾನ ನೆಟ್ಟಿಗರ ಮನ ಗೆದ್ದಿದೆ. ಎಲ್‌ಆರ್‌ಟಿ ಮಾರ್ಗದ ಪಕ್ಕದಲ್ಲಿ ವಾಸಿಸುವ ನಾಗರಿಕರ ಗೌಪ್ಯತೆಯನ್ನು ರಕ್ಷಿಸಲು ರೈಲಿನ ನವೀನ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.
ಆದ್ದರಿಂದ, ಸಾರ್ವಜನಿಕ ಸಾರಿಗೆ ವಾಹನವು ವಸತಿ ಕಟ್ಟಡದ ಹತ್ತಿರ ಬಂದಾಗ, ಅದರ ಕಿಟಕಿಗಳು ಸ್ವಯಂಚಾಲಿತವಾಗಿ ಬ್ಲರ್ ಆಗಿ ಹೊರಗಡೆಯ ವಸ್ತುಗಳು ಕಾಣಿಸುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಾಹನದಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ಸಿಂಗಪುರದ ತಂತ್ರಜ್ಞಾನಕ್ಕೆ ಸಿಂಗಪುರವೇ ಸಾಟಿ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.