ಅಫಘಾತವೊಂದರಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಸಿಂಗಪುರದ ಯುವಕನೊಬ್ಬನ ಪ್ರಾಣವನ್ನು ಆತನ ಕೈಯಲ್ಲಿದ್ದ ಆಪಲ್ ವಾಚ್ ರಕ್ಷಿಸಿದೆ.
ಮೊಹಮ್ಮದ್ ಫಿತ್ರಿ ಹೆಸರಿನ 24 ವರ್ಷದ ಈ ಯುವಕ ವ್ಯಾನ್ ಒಂದು ಗುದ್ದಿದ ಕಾರಣ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆ ರಸ್ತೆಯಲ್ಲಿ ಜನಸಂಚಾರ ತೀರಾ ವಿರಳವಾಗಿತ್ತು. ಆದರೆ ಫಿತ್ರಿ ಕೈಯಲ್ಲಿದ್ದ ಆಪಲ್ ಸೀರೀಸ್ 4 ಕೈಗಾಡಿಯಾರದಲ್ಲಿರುವ ಕುಸಿತ ಪತ್ತೆ ಫೀಚರ್‌ನಿಂದಾಗಿ ಇಸಿಜಿ ಟ್ರಾಕರ್ ಜೊತೆಗೆ ಕೆಲಸ ಮಾಡಿ ತುರ್ತು ಕರೆ ಮೂಲಕ ಜೀವರಕ್ಷಕರನ್ನು ಅಲರ್ಟ್ ಮಾಡಿದೆ.
BIG NEWS: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ; ಪಿಎ ಮಹೇಶ್ ವಿರುದ್ಧ FIR ದಾಖಲು
ತುರ್ತು ಸೇವೆಗಳು ಹಾಗೂ ಫಿತ್ರಿಯ ಸಂಪರ್ಕಗಳಿಗೆ ಅಲರ್ಟ್‌ಅನ್ನು ಆತನ ಆಪಲ್ ವಾಚ್ ರವಾನೆ ಮಾಡಿದೆ. ಕುಸಿತದ ಅಲರ್ಟ್ ಹೊರಡಿಸಿದ ಕೆಲವು ಸೆಕೆಂಡ್‌ಗಳ ಒಳಗೆ ಬಳಕೆದಾರನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಈ ವಾಚ್ ತನ್ನಿಂತಾನೇ ಎಸ್‌ಓಎಸ್ ಕಳುಹಿಸುತ್ತದೆ.
ಆಪಲ್‌ನ ಸೀರೀಸ್ 4ರ ನಂತರ ಬರುವ ಎಲ್ಲಾ ವಾಚ್‌ಗಳಲ್ಲೂ ಈ ಫೀಚರ್ ಇದೆ. ಬಳಕೆದಾರರ ಇಸಿಜಿ ದಾಖಲಿಸಿಕೊಳ್ಳುವ ಈ ಗಡಿಯಾರ ತುರ್ತು ಪರಿಸ್ಥಿತಿಯಲ್ಲಿ ಅಲರ್ಟ್ ಸಂದೇಶಗಳನ್ನು ತುರ್ತು ಸೇವಾದಾರರಿಗೆ ರವಾನೆ ಮಾಡುತ್ತದೆ.