
ಕಲರ್ಸ್ ಟಿವಿ ಹಿಂದಿ ಭಾಷೆಯ ಇತ್ತೀಚೆಗಿನ ಥಾಪ್ಕಿ ಪ್ಯಾರ್ ಕಿ ಚಿತ್ರದ ಸಿಂಧೂರ್ ದೃಶ್ಯ ವೈರಲ್ ಆಗಿದೆ. ಇದು ಭೌತಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ದೃಶ್ಯದಲ್ಲಿ ಥಾಪ್ಕಿ ಎಂಬಾಕೆ ಸ್ನಾನ ಮಾಡಿ ಬಂದ ನಂತರ ಕನ್ನಡಿ ಮುಂದೆ ನಿಂತಿದ್ದಾಳೆ. ಈ ವೇಳೆ ಅಲ್ಲಿ ಬಂದ ಆಕೆಯ ಪತಿ ಪುರಬ್ ನೆಲದ ಮೇಲೆ ಚೆಲ್ಲಿದ್ದ ನೀರಿಗೆ ಕಾಲಿಟ್ಟ ಪರಿಣಾಮ ಜಾರಿ ಥಾಪ್ಕಿ ಮೇಲೆ ಬಿದ್ದಿದ್ದಾನೆ. ಈ ವೇಳೆ ಈತನ ಕೈ ಬೆರಳು ಸಿಂಧೂರಕ್ಕೆ ತಾಗಿ ಥಾಪ್ಕಿಯ ಹಣೆಗೆ ಹಚ್ಚಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ. ಈ ಲಾಜಿಕ್ ಗೆ ನೆಟ್ಟಿಗರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅಲ್ಲದೆ, ಈ ವಿಡಿಯೋ ನೋಡಿ ಆಶ್ಚರ್ಯದಿಂದ ನ್ಯೂಟನ್ ಸಮಾಧಿಯಿಂದ ಎದ್ದು ಬಂದಿದ್ದಾನೆ ಎಂದೆಲ್ಲಾ ನೆಟ್ಟಿಗರು ತಮಾಷೆ ಮಾಡಿದ್ದಾರೆ.
https://twitter.com/Vandz_JustVandz/status/1454174650938822660?ref_src=twsrc%5Etfw%7Ctwcamp%5Etweetembed%7Ctwterm%5E1454174650938822660%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fsindoor-scene-from-thapki-pyaar-ki-goes-viral-netizens-say-rip-logic%2F828648