ದೇಶದಲ್ಲಿ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸಾರಿಗೆ ಕ್ಷೇತ್ರದ ಹೊಸ ಆಯಾಮದಲ್ಲಿ ಕ್ರಾಂತಿ ತರಲು ಅನೇಕ ಕಂಪನಿಗಳು ಸನ್ನದ್ಧಗೊಂಡಿವೆ.
ದೇಶೀಯವಾಗಿ ಅಭಿವೃದ್ಧಿಯಾಗಿರುವ ಇವಿ ಉತ್ಪಾದಕ ಸಿಂಪಲ್ ಎನರ್ಜಿ ನಿಧಿ ಸಂಗ್ರಹಣೆ ಮೂಲಕ $21 ದಶಲಕ್ಷ ಸಂಗ್ರಹಣೆ ಮಾಡಿರುವುದಾಗಿ ತಿಳಿಸಿದೆ. ಈ ನಿಧಿ ಸಂಗ್ರಹಣೆ ಅಭಿಯಾನಕ್ಕೆ ಕಂಪನಿಯ ಹೂಡಿಕೆದಾರರು ಹಾಗೂ ಮಂಡಳಿ ಸದಸ್ಯರಾದ ಮನೀಷ್ ಭಾರತಿ ಹಾಗೂ ರಘುನಾಥ್ ಸುಬ್ರಮಣಿಯನ್ ಚಾಲನೆ ನೀಡಿದ್ದರು.
ಸತ್ವ ಸಮೂಹ, ಅತಿಯಾಸ್ ಸಮೂಹ ಸೇರಿದಂತೆ ಭಾರೀ ಮೌಲ್ಯದದ ಅನೇಕ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸಿಂಪಲ್ ಎನರ್ಜಿಯ ಹೂಡಿಕೆ ಸಂಗ್ರಹಣೆ ಅಭಿಯಾನಕ್ಕೆ ಪಾಲು ನೀಡಿದ್ದಾರೆ.
ಆಗ್ರಾ: ಮೊಘಲ್ ರಸ್ತೆಗೆ ’ಮಹಾರಾಜ ಅಗ್ರಸೇನ್ ರಸ್ತೆ’ ಎಂದು ಮರುನಾಮಕರಣ
ಸಂಗ್ರಹಗೊಂಡ ನಿಧಿಯನ್ನು ಉತ್ಪನ್ನದ ಅಭಿವೃದ್ಧಿ, ಅನುಭವ ಕೇಂದ್ರಗಳ ಸ್ಥಾಪನೆ ಹಾಗೂ ಉತ್ಪಾದನೆಯ ಮೊದಲ ಹಂತದ ಸ್ಥಾಪನೆಗೆ ಬಳಸಲಾಗುವುದು ಎಂದು ಸಿಂಪಲ್ ಎನರ್ಜಿ ತಿಳಿಸಿದೆ. $15 ದಶಲಕ್ಷದಷ್ಟು ಹೂಡಿಕೆ ಕ್ರೋಢೀಕರಣದ ಉದ್ದೇಶದಿಂದ ಈ ಅಭಿಯಾನಕ್ಕೆ ಇಳಿದಿದ್ದ ಸಿಂಪಲ್ ಎನರ್ಜಿ, ನಿರೀಕ್ಷೆಗಿಂತ $6 ದಶಲಕ್ಷ ಹೆಚ್ಚಾಗಿಯೇ ನಿಧಿ ಸಂಗ್ರಹಿಸಿದೆ.
ಮೊದಲ ಹಂತದಲ್ಲಿ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಲಾಂಚ್ ಆಗುವುದಾಗಿ ಬ್ರಾಂಡ್ ಈ ಮುನ್ನ ಘೋಷಿಸಿತ್ತು.