
ಸೌಂದರ್ಯ ಪ್ರಿಯರಿಗೆ ಮನೆಯಲ್ಲೇ ಮಾಡಬಹುದಾದ ಒಂದಿಷ್ಟು ಫೇಸ್ ಸ್ಕ್ರಬ್ ಗಳ ಬಗ್ಗೆ ಮಶಹಿತಿ ಇಲ್ಲಿದೆ.
ಒಂದು ಚಮಚ ಇನ್ ಸ್ಟಂಟ್ ಕಾಫಿ ಪುಡಿ ತೆಗೆದುಕೊಳ್ಳಿ. ಇದನ್ನು ತೆಂಗಿನೆಣ್ಣೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿ ನಿಧಾನಕ್ಕೆ ಸ್ಕ್ರಬ್ ಮಾಡಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಮುಖದ ಮೊಡವೆ, ಕಲೆ ಸಮಸ್ಯೆಗಳು ದೂರವಾಗುತ್ತವೆ.
ಒಂದು ಚಮಚ ಜೇನಿಗೆ ಎರಡು ಹನಿ ನಿಂಬೆ ಮತ್ತು ಸ್ವಲ್ಪ ಸಕ್ಕರೆ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಮುಖಕ್ಕೆ ಸ್ಕ್ರಬ್ ಮಾಡಿ. ಅರ್ಧ ಗಂಟೆ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖದ ಸತ್ತ ಜೀವಕೋಶಗಳು ದೂರವಾಗಿ ಮುಖ ಸ್ವಚ್ಛವಾಗುತ್ತದೆ.
ಫೇಸ್ ಕ್ಲೆನ್ಸರ್ ಗೆ ಬೇಕಿಂಗ್ ಸೋಡಾ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಜಿಡ್ಡಿನಂಶ ದೂರವಾಗುತ್ತದೆ. ಓಟ್ಸ್ ಮೀಲ್ ಸ್ಕ್ರಬ್ ನಿಂದಲೂ ನಿಮ್ಮ ತ್ವಚೆ ಹೊಳಪು ಪಡೆಯುತ್ತದೆ. ಇದನ್ನು ತಯಾರಿಸುವಾಗ ಓಟ್ ಮೀಲ್ಸ್ ಗೆ ಸ್ವಲ್ಪ ಹಾಲು ಮತ್ತು ಆಲಿವ್ ಎಣ್ಣೆ ಮಿಶ್ರಣ ಮಾಡಿ.