alex Certify ಮನೆ, ಸೈಟ್ ಇಲ್ಲದವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಗೃಹ ಮಂಡಳಿಯಿಂದ ನಿವೇಶನ, ಮನೆ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ, ಸೈಟ್ ಇಲ್ಲದವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಗೃಹ ಮಂಡಳಿಯಿಂದ ನಿವೇಶನ, ಮನೆ ವಿತರಣೆ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ ಜಿ ಕೆಟಗರಿ ಅಡಿಯಲ್ಲಿ ನಿವೇಶನ, ಮನೆಗಳನ್ನು ವಿತರಿಸಲಾಗುವುದು.

ವಸತಿ ಸಚಿವ ವಿ. ಸೋಮಣ್ಣ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಮುಖ ಪ್ರಶಸ್ತಿ ಪುರಸ್ಕೃತರು, ನ್ಯಾಯಾಧೀಶರು, ಕ್ರೀಡಾಪಟುಗಳು, ಪತ್ರಕರ್ತರು, ವಿಕಲಚೇತನರಿಗೆ ಶೇಕಡ 5 ರಷ್ಟು ಮನೆ, ನಿವೇಶನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಈ ವರ್ಷ 50,000 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಬೆಂಗಳೂರಿನ ಸೂರ್ಯ ನಗರದ ನಾಲ್ಕನೇ ಹಂತದಲ್ಲಿ 30,000 ನಿವೇಶನ ಸೇರಿದಂತೆ ರಾಜ್ಯದ ವಿವಿಧತೆ 50,000 ನಿವೇಶನ ಹಂಚಿಕೆ ಮಾಡಲಾಗುವುದು. ಚನ್ನಗಿರಿ, ಮೈಸೂರು, ಬಾಗಲಕೋಟೆ, ಮುಂಡರಗಿ, ಗದಗ, ಹರಿಹರ, ನೆಲಮಂಗಲ, ಮಾದನಾಯಕನಹಳ್ಳಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು, 18 ಯೋಜನೆಗಳಿಗೆ ಡಿಪಿಆರ್ ಮಾಡಿ 16 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಒಂದು ಲಕ್ಷ ಮನೆ ಯೋಜನೆ ಅಡಿ ಬೆಂಗಳೂರಿನಲ್ಲಿ 48,498 ಮನೆ ಹಂಚಿಕೆ ಮಾಡಲಾಗಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...