ಪಂಜಾಬ್ ಗಾಯಕ ಸಿಧು ಮೂಸೇವಾಲ ಕೊಲೆಯಾದ ನಂತರ ಅವರು ಹಾಡಿದ್ದ ಕೊನೆಯ ಹಾಡು SYL ಆನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಆದರೆ, ಈ ಹಾಡಿನಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ನಡುವಿನ ಸಟ್ಲೆಜ್-ಯಮುನಾ ಸಂಪರ್ಕ ಕಾಲುವೆ ವಿವಾದ ಮತ್ತು ರೈತ ಹೋರಾಟದ ಸಂದರ್ಭದಲ್ಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜವನ್ನು ಹಾರಿಸಿದ್ದನ್ನು ತೋರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ದೂರು ನೀಡಿದ್ದರಿಂದ ಹಾಡನ್ನು ಯೂಟ್ಯೂಬ್ ತನ್ನ ವಾಲ್ ನಿಂದ ತೆಗೆದುಹಾಕಿದೆ.
ಈ ವಿಡಿಯೋವನ್ನು 27 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿತ್ತು ಮತ್ತು 3.3 ಮಿಲಿಯನ್ ಲೈಕ್ ಗಳು ಬಂದಿದ್ದವು. ಈ ಹಾಡನ್ನು ಸ್ವತಃ ಸಿಧು ಮೂಸೇವಾಲ ಅವರೇ ಕಂಪೋಸ್ ಮಾಡಿದ್ದರು. ಮೇ 29 ರಂದು ಅವರು ಹತ್ಯೆಯಾಗಿದ್ದು, ಜೂನ್ 23 ರಂದು ಹಾಡನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.