alex Certify ಕೊರೊನಾ ನಂತ್ರ ಕಾಡ್ತಿದೆ ಮುಜಗರಕ್ಕೀಡು ಮಾಡುವ ಇಂಥ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಂತ್ರ ಕಾಡ್ತಿದೆ ಮುಜಗರಕ್ಕೀಡು ಮಾಡುವ ಇಂಥ ಸಮಸ್ಯೆ

ಕೊರೊನಾ ಹಾಗೂ ಓಮಿಕ್ರೋನ್ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾ ರೋಗಿಗಳಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಶೀತ, ಜ್ವರ ಮತ್ತು ಕೆಮ್ಮಿನಂತಹ ಸಾಮಾನ್ಯ ರೋಗಲಕ್ಷಣಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ನಂತ್ರ ಕಾಡುವ ಕೆಲವು ಸಮಸ್ಯೆಗಳು ಮುಜುಗರಕ್ಕೀಡು ಮಾಡ್ತಿವೆ.

ಕೊರೊನಾ ರೋಗ ಜನರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರ್ತಿದೆ. ಕಿಂಗ್ಸ್ ಕಾಲೇಜ್ ವಿಶ್ವವಿದ್ಯಾಲಯವು 3,400 ಜನರನ್ನು ಅಧ್ಯಯನ ಮಾಡಿತ್ತು. ಇದರ  ಆಧಾರದ ಮೇಲೆ ಈ ರೋಗಲಕ್ಷಣದ ಬಗ್ಗೆ ಹೇಳಿಕೆ ನೀಡಿದೆ. ಇವರ ಅಧ್ಯಯನದ ಪ್ರಕಾರ 14.6 ರಷ್ಟು ಪುರುಷರು ಮತ್ತು ಶೇಕಡಾ 8 ರಷ್ಟು ಮಹಿಳೆಯರು ಕೋವಿಡ್ ಬಂದ  ನಂತರ ಬಹಳ ಸಮಯದವರೆಗೆ ಲೈಂಗಿಕ ತೊಂದರೆಗಳನ್ನು ಅನುಭವಿಸಿದ್ದರು.

ಕೊರೊನಾ ವೈರಸ್ ಸೋಂಕಿನಿಂದ ಪುರುಷರಲ್ಲಿ ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ ಸಮಸ್ಯೆ ಕಾಡ್ತಿದೆ ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ರೋಗಿಗಳಲ್ಲಿ ಶೇಕಡಾ 3.2 ರಷ್ಟು ಪುರುಷರು ಈ  ಸಮಸ್ಯೆಗಳನ್ನು ಹೊಂದಿದ್ದಾರೆ. ಶಿಶ್ನದಲ್ಲಿ ಕಂಡುಬರುವ ರಕ್ತನಾಳಗಳ ಎಂಡೋಥೀಲಿಯಲ್ ಕೋಶಗಳಿಗೆ ವೈರಸ್ ಪ್ರವೇಶಿಸಿದಾಗ, ಅದು ರಕ್ತದ ಹರಿವನ್ನು ಕುಂಠಿತಗೊಳಿಸುತ್ತದೆ. ಇದರಿಂದ  ಸಮಸ್ಯೆ  ಉಂಟಾಗುತ್ತದೆ.

ಕೆಲವು ಖಾಸಗಿ ಸಂಶೋಧನೆಗಳ ಪ್ರಕಾರ, ಕೊರೊನಾ ರೋಗಿಗಳಿಗೆ ಬೇಧಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ 35 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳು ಶೇಕಡಾ 30 ರಷ್ಟು ಜನರಲ್ಲಿ ಈ ಸಮಸ್ಯೆ  ಕಂಡುಬಂದಿದೆ. ನಿದ್ರಿಸುವಾಗ ಗೊರಕೆ ಹೊಡೆಯುವುದು ಕೊರೊನಾದ ನಂತ್ರ ಕಾಣಿಸಿಕೊಳ್ತಿರುವ ಇನ್ನೊಂದು ಸಮಸ್ಯೆ  ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರಿಗೆ  ಗೊರಕೆ ಹೊಡೆಯುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳ ಹೊರತಾಗಿ ಬೆವರುವುದು, ಮಾನಸಿಕ ಕಿರಿಕಿರಿ, ಬಾಯಿ ವಾಸನೆ ಸಮಸ್ಯೆ ಕೂಡ ಕಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...