alex Certify ಈ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಆರೊಗ್ಯಕ್ಕೆ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಆರೊಗ್ಯಕ್ಕೆ ಹಾನಿ

ಸಕ್ಕರೆ ಖಾಯಿಲೆ ಇರುವವರಿಗೆ ಸಿಹಿ ಪದಾರ್ಥಗಳು ಒಳ್ಳೆಯದಲ್ಲ. ಬಿಪಿ ತೊಂದರೆ ಇರುವವರು ಉಪ್ಪು ಹೆಚ್ಚು ತಿನ್ನಬಾರದು. ಎಸಿಡಿಟಿ ಸಮಸ್ಯೆ ಇರುವವರು, ಗ್ಯಾಸ್ ಸಮಸ್ಯೆ ಇರುವವರು, ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗೆಯೇ ನೆಲ್ಲಿಕಾಯಿ ಅನೇಕ ರೋಗಗಳಿಗೆ ರಾಮಬಾಣವಾದರೂ, ಈ ಕೆಳಗಿನ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ವಿಷ ತಿಂದಂತೆಯೇ ಸರಿ.

ಲೋ ಬ್ಲಡ್ ಶುಗರ್ ಸಮಸ್ಯೆ

ವಿಟಮಿನ್ ‘ಸಿ’ಯ ಆಗರವಾಗಿರುವ ಮತ್ತು ಕಬ್ಬಿಣ, ರಂಜಕ, ಕ್ರೋಮಿಯಂ ನಂತಹ ಖನಿಜಗಳನ್ನು ಒಳಗೊಂಡಿರುವ ನೆಲ್ಲಿಕಾಯಿ ತಿನ್ನುವುದರಿಂದ ಹೈ ಬ್ಲಡ್ ಶುಗರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಒಮ್ಮೆ ನಿಮ್ಮ ಬ್ಲಡ್ ಶುಗರ್ ಈಗಾಗಲೇ ಕಡಿಮೆ ಇದ್ದಲ್ಲಿ ಮತ್ತು ನೀವು ಎಂಟಿ ಡಯಾಬಿಟಿಕ್ ಮಾತ್ರೆಗಳನ್ನು ಸೇವಿಸುತ್ತಿದ್ದಲ್ಲಿ ನೆಲ್ಲಿಕಾಯಿಯನ್ನು ತಿನ್ನಲು ಹೋಗಬೇಡಿ.

ಒಮ್ಮೆ ನೀವು ಯಾವುದಾದರೂ ಸರ್ಜರಿಗೆ ಒಳಗಾಗುತ್ತಿದ್ದಲ್ಲಿ ಸರ್ಜರಿಗೆ 2 ವಾರ ಮೊದಲು ನೆಲ್ಲಿಕಾಯಿ ತಿನ್ನಬೇಡಿ. ಏಕೆಂದರೆ ನೆಲ್ಲಿಕಾಯಿ ರಕ್ತವನ್ನು ತೆಳುವಾಗಿಸುತ್ತದೆ. ಇದರಿಂದ ಸರ್ಜರಿಯ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಬಹುದು. ಇದಲ್ಲದೇ ದೀರ್ಘಕಾಲದ ರಕ್ತಸ್ರಾವದಿಂದ ಟಿಶ್ಶೂ ಹೈಪೋಕ್ಸಿಮಿಯಾ, ಸಿವಿಆರ್ ಎಸಿಡೋಸಿಸ್ ಅಥವಾ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಉಂಟಾಗಬಹುದು.

ವಿಟಮಿನ್ ‘ಸಿ’ಯ ಆಗರವಾಗಿರುವ ನೆಲ್ಲಿಕಾಯಿ ಎದೆಯುರಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಹೈಪರ್ ಎಸಿಡಿಟಿ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ ಮತ್ತು ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು.

ನಿಮಗೆ ಡ್ರೈ ಸ್ಕಿನ್ ಮತ್ತು ಡ್ರೈ ಸ್ಕೆಲ್ಫ್ ಸಮಸ್ಯೆ ಇದ್ದರೆ ನೆಲ್ಲಿಕಾಯಿ ತಿನ್ನಬೇಡಿ. ನೆಲ್ಲಿಕಾಯಿ ತಿನ್ನುವುದರಿಂದ ತಲೆಹೊಟ್ಟು, ತುರಿಕೆ ಮತ್ತು ಕೂದಲು ಉದುರುವಿಕೆ ಉಂಟಾಗುತ್ತದೆ. ಇದರಿಂದ ಡಿಹೈಡ್ರೇಶನ್ ಸಮಸ್ಯೆ ಕೂಡ ಆಗಬಹುದು.

ನೆಲ್ಲಿಕಾಯಿಯಲ್ಲಿ ಎಂಟಿಪ್ಲೇಟ್ಲೆಟ್ ಗುಣವಿದೆ. ಇದು ನಿಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದು ನಿಮ್ಮನ್ನು ಹಾರ್ಟ್ ಅಟ್ಯಾಕ್, ಸ್ಟ್ರೋಕ್ ತೊಂದರೆಯಿಂದ ಕಾಪಾಡುತ್ತದೆ. ಒಮ್ಮೆ ನಿಮಗೆ ರಕ್ತದ ಸಮಸ್ಯೆ ಇದ್ದಲ್ಲಿ ನೆಲ್ಲಿಕಾಯಿಯನ್ನು ತಿನ್ನಬೇಡಿ. ನೆಲ್ಲಿಕಾಯಿ ತಿನ್ನುವುದರಿಂದ ರಕ್ತ ತೆಳುವಾಗುತ್ತದೆ, ಬ್ಲಡ್ ಕ್ಲಾಟ್ ಆಗುವುದಿಲ್ಲ. ಹಾಗಾಗಿ ರಕ್ತಸ್ರಾವದ ತೊಂದರೆ ಇರುವವರು ನೆಲ್ಲಿಕಾಯಿಯನ್ನು ತಿನ್ನುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...