ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರಿದೆ. ಈಗಾಗಲೇ ಘಟಾನುಘಟಿ ನಾಯಕರು ಉಪಚುನಾವಣಾ ಕಣಗಳಿಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ.
ಇಂದು ಹಾನಗಲ್ನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ರು.
BIG NEWS: ಅಲ್ಪಸಂಖ್ಯಾತ ಪರ ಎನ್ನುವ ಕಾಂಗ್ರೆಸ್ ಈ ಕೆಲಸ ಮಾಡಿ ತೋರಿಸಲಿ; ಬಹಿರಂಗ ಸವಾಲೆಸೆದ ಸಚಿವ ಗೋವಿಂದ ಕಾರಜೋಳ
ಆರ್ಎಸ್ಎಸ್ ಕೇವಲ ಒಂದು ಕೋಮು ಸಂಘಟನೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಸಂಘಟನೆಯ ಪಾತ್ರ ಏನೂ ಇಲ್ಲ. ಇವರು ಹೆಸರಿಗಾಗಿ ಮಾತ್ರ ದೇಶ ಭಕ್ತರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಗಾಂಧಿಜಿ. ಆರ್ಎಸ್ಎಸ್ ಅಲ್ಲ ಎಂದು ಗುಡುಗಿದ್ರು.
ಪ್ರಧಾನಿ ಮೋದಿ ವಿರುದ್ಧವೂ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಸೊಸೈಟಿ ಸಾಲ ಮನ್ನಾ ಮಾಡಿದ್ದು ನಾನು. ಕೃಷಿ ಮಸೂದೆ ವಿರೋಧಿಸಿ ರೈತರು ಕಳೆದ 10 ತಿಂಗಳಿನಿಂದ ಪ್ರತಿಭಟನೆ ಮಾಡ್ತಿದ್ದಾರೆ. ಆದರೆ ಮೋದಿ ರೈತರನ್ನು ಕರೆದು ಮಾತನಾಡಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡಿದರಾ ಮೋದಿ,.? ಲಖೀಂಪುರದಲ್ಲಿ ರೈತರ ಮೇಲೆ ಹಿಂಸಾಚಾರ ನಡೀತು..? ಯಾವೊಬ್ಬ ಕೇಂದ್ರ ಸಚಿವರೂ ಈ ಬಗ್ಗೆ ಮಾತನಾಡಲಿಲ್ಲ. ಆದರೆ ಪ್ರಿಯಾಂಕ ಗಾಂಧಿ ವಾದ್ರಾ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ್ರು. ಆದರೆ ಪ್ರಿಯಾಂಕ ಗಾಂಧಿಯನ್ನೇ ಬಂಧಿಸಲಾಯ್ತು ಎಂದು ಗುಡುಗಿದ್ರು.
ರಾಹುಲ್ ʼಡ್ರಗ್ ಪೆಡ್ಲರ್ʼ ಎಂದಿದ್ದ ನಳೀನ್ ಕುಮಾರ್ ಗೆ ಫಿನಾಯಿಲ್ ಬಾಟಲಿ ಪಾರ್ಸಲ್..!
ಹಾನಗಲ್ ಉಪಚುನಾವಣೆ ವಿಚಾರವಾಗಿಯೂ ಮಾತನಾಡಿದ ಸಿದ್ದರಾಮಯ್ಯ, ಸಜ್ಜನ್ ನಿಜವಾಗಿಯೂ ಸಜ್ಜನನಲ್ಲ. ಆತ ಒಬ್ಬ ದುರ್ಜನ. ಈ ಚುನಾವಣೆಯ ಮೂಲಕ ನೀವು ಆ ದುರ್ಜನನ್ನು ಕಿತ್ತೊಗೆಯಬೇಕಿದೆ. ಕಾಂಗ್ರೆಸ್ನವರು ಪಾಂಡವರಿದ್ದಂತೆ. ಬಿಜೆಪಿಯವರು ಕೌರವರಿದ್ದಂತೆ. ನೀವು ಕೌರವರಿಗೆ ಮತ ಹಾಕ್ತೀರಾ..? ಮನಮೋಹನ್ ಸಿಂಗ್ ಆಢಳಿತಾವಧಿಯಲ್ಲಿ ಪೆಟ್ರೋಲ್ ದರ 70 ರೂಪಾಯಿ ಇತ್ತು. ಆದರೆ ಈಗ 100 ರೂಪಾಯಿ ದಾಟಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಜನತೆ ನರಕ ನೋಡಿದ್ದಾರೆ ಎಂದು ಹೇಳಿದ್ರು.