ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಕ್ಕರೆ ಹೆಚ್ಚು ಸೇವಿಸಬೇಡಿ ಎಂದು ಹೇಳುತ್ತಾರೆ. ಆದರೆ ಅವರು ಸಕ್ಕರೆ ಸೇವಿಸುವ ಪ್ರಮಾಣ ಕಡಿಮೆ ಮಾಡುವ ಬದಲು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಆದರೆ ಇದರಿಂದ ಅವರು ಬೇರೆ ಸಮಸ್ಯೆಗೆ ತುತ್ತಾಗುವ ಸಂಭವವಿದೆ ಎಂದು ಹೇಳಲಾಗುತ್ತದೆ.
ಮಧುಮೇಹಿಗಳು ದಿನಕ್ಕೆ 30ಗ್ರಾಂನಷ್ಟು ಅಂದರೆ 7 ಚಮಚದಷ್ಟು ಸಕ್ಕರೆ ಅಂಶವನ್ನು ಬಳಸಬಹುದಂತೆ. ಹಾಗಾಗಿ ಸಿಹಿ ಪಾನೀಯಗಳನ್ನು ಸೇವಿಸುವ ಬದಲು ಹಣ್ಣುಗಳನ್ನು, ತರಕಾರಿಗಳನ್ನು, ಡೈರಿ ಪದಾರ್ಥಗಳನ್ನು ಸೇವಿಸಿ. ಹಾಗೇ ತಾಜಾ ಹಣ್ಣಿನ ಜ್ಯೂಸ್, ಹಣ್ಣಿನ ಮಿಲ್ಕ್ ಶೇಕ್ ಗಳನ್ನು ಸೇವಿಸಬಹುದು. ಇವುಗಳು ನಿಧಾನವಾಗಿ ಹೀರಲ್ಪಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ.
ಆದರೆ ನೀವು ಸಿಹಿ ತಿಂಡಿಗಳು, ಕೇಕ್, ಬಿಸ್ಕತ್ತುಗಳು, ಚಾಕೋಲೇಟ್ , ಸಕ್ಕರೆ ಪಾನೀಯಗಳು, ಜೇನುತುಪ್ಪ, ಸಿರಪ್ ಇತ್ಯಾದಿಗಳನ್ನು ಸೇವಿಸಬೇಡಿ.