alex Certify ಜೀವನದಲ್ಲಿ ಸದಾ ಲವಲವಿಕೆಯಿಂದಿರಬೇಕೇ…? ಯಥೇಚ್ಛವಾಗಿ ಹಣ್ಣು – ತರಕಾರಿ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸದಾ ಲವಲವಿಕೆಯಿಂದಿರಬೇಕೇ…? ಯಥೇಚ್ಛವಾಗಿ ಹಣ್ಣು – ತರಕಾರಿ ಸೇವಿಸಿ

ಒಂದು ಹೊಸ ಅಧ್ಯಯನ ಪ್ರಕಾರ ಜನರು ಸದಾಕಾಲ ಸಂತೋಷದಲ್ಲೇ ಮುಳುಗಿರಬೇಕು ಎನ್ನುವುದಾದರೆ ವ್ಯಾಯಾಮ, ಹಣ್ಣು-ತರಕಾರಿ ಸೇವನೆ ಹೆಚ್ಚಿಸಬೇಕಂತೆ.

ಜೀವನಶೈಲಿಗೂ, ಆರೋಗ್ಯಕ್ಕೂ ಇರುವ ಪೂರಕ ಅಂಶಗಳನ್ನು ಅಧ್ಯಯನ ಮುಖ್ಯ ಭಾಗವಾಗಿ ಅಧ್ಯಯನ ನಡೆಸಿರುವವರು ರೀಡಿಂಗ್ಸ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯರಾದ ಡಾ. ಅಡಿಲಿನಾ ಶ್ವಾಂಟ್ನರ್‌ ಮತ್ತು ಡಾ. ಸರಾ ಜಿವೆಲ್‌ ಹಾಗೂ ಪ್ರೊ. ಉಮಾ ಕಂಭಂಪತಿ ಅವರು.

ಜೀವನಶೈಲಿ ರೋಗಗಳನ್ನು ನಿಯಂತ್ರಿಸಲು ಹೆಚ್ಚೆಚ್ಚು ಲವಲವಿಕೆ, ಖುಷಿಯಿಂದ ಇರುವುದು ಮುಖ್ಯವಾಗಿದೆ. ಇದಕ್ಕೆ ಪೂರಕವಾಗಿ ಹಣ್ಣು-ತರಕಾರಿ ಸೇವನೆ ಕೆಲಸ ಮಾಡುತ್ತದೆ.

ಸ್ಥೂಲಕಾಯದಿಂದ ಖಿನ್ನತೆ ಹೆಚ್ಚುತ್ತದೆ. ಸೋಮಾರಿ ದೇಹವು ಅನಾವಶ್ಯಕ ಆಲೋಚನೆಗಳ ಭಂಡಾರವಾಗುತ್ತದೆ. ಬದಲಿಗೆ ದಿನನಿತ್ಯದ ಅಭ್ಯಾಸಗಳನ್ನು ಬದಲಿಸಿಕೊಂಡು ಚಟುವಟಿಕೆಯಿಂದ ಇರಬೇಕು. ಹೆಚ್ಚೆಚ್ಚು ವ್ಯಾಯಾಮ, ಹಣ್ಣುಗಳ ಸೇವನೆ ಸಂತಸದ ಜೀವನದತ್ತ ಕೊಂಡೊಯ್ಯುತ್ತದೆ ಎಂದಿದ್ದಾರೆ ಡಾ. ಎಡಿನಾ.

ತಜ್ಞವೈದ್ಯರ ಪ್ರಕಾರ ಕೂಡ ದೇಹವು ಲವಲವಿಕೆ ಭರಿತವಾಗಿರಲು ಮತ್ತು ಚಿಂತನೆಗಳು ಆಹ್ಲಾದಕರವಾಗಿರಲು ಆ್ಯಂಟಿ ಆಕ್ಸಿಡೆಂಟ್ಸ್‌ಗಳ ಪಾತ್ರ ಪ್ರಮುಖವಾಗಿದೆ. ಅಂಥ ಆಕ್ಸಿಡೆಂಟ್ಸ್‌ ಹೇರಳವಾಗಿ ಇರುವುದು ಹಣ್ಣುಗಳಲ್ಲಿ ಮಾತ್ರ.

ಅದರಲ್ಲೂ ರಾಸಾಯನಿಕಗಳಿಂದ ಮುಕ್ತವಾದ ಸಾವಯವ ಅಥವಾ ಆಗ್ರ್ಯಾನಿಕ್‌ ಪದ್ಧತಿಯಲ್ಲಿ ಬೆಳೆದ ಹಣ್ಣುಗಳಲ್ಲಿ ನೈಸರ್ಗಿಕ ಅಂಶಗಳು ದೇಹಕ್ಕೆ ಚೇತನ ತುಂಬುತ್ತವೆ ಎಂದು ಹಲವು ಸಂಶೋಧನೆಗಳಿಂದ ಖಾತ್ರಿಪಟ್ಟಿದೆ. ಸದಾ ಖುಷಿಯಾಗಿರಬೇಕೆಂದು ಬಯಸುವವರಿಗೆ ಈ ಸುದ್ದಿ ಓದಿ ಖುಷಿಯಾಗಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...