
ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಶೌಕತ್ ಅಲಿ ಮುಕಾಡಮ್ ಅವರ ಮಗಳನ್ನು ಇಸ್ಲಾಮಾಬಾದ್‌ನ ಅವರ ಮನೆಯಲ್ಲೇ ಅಮಾನುಷವಾಗಿ ಹತ್ಯೆ ಮಾಡಲಾಗಿದೆ.
ಇಸ್ಲಾಮಾಬಾದ್‌ನ ಪ್ರಮುಖ ನಿರ್ಮಾಣ ಕಂಪನಿಯ ಸಿಇಒ ಮಗ ಜಾಹಿದ್ ಜಾಫರ್ ಕೊಲೆಗಾರ ಎಂದು ಗುರುತಿಸಲಾಗಿದೆ.
ಶೌಕತ್ ಮುಕಾಡಮ್ ಕಜಕಿಸ್ತಾನದ ಪಾಕಿಸ್ತಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಶೌಕತ್ ಅಲಿ ಮುಕಾಡಮ್‌ರ 27 ವರ್ಷದ ಮಗಳು ನೂರ್ ಮುಕಾಡಮ್ ಮೇಲೆ ಗುಂಡು ಹಾರಿಸಿದ್ದು, ನಂತರ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ದಾಳಿಯಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದಾನೆ.
ಹ್ಯಾಕರ್ಸ್ಗಳು ನಿಮ್ಮ ’ಫೋನ್’ನ್ನು ಯಾವೆಲ್ಲ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಾರೆ ಗೊತ್ತಾ….?
ಕೊಲೆಯಲ್ಲಿ ಭಾಗಿಯಾಗಿದ್ದ ಜಹೀರ್ ಜಾಫರ್ ಎಂಬ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ.