ಸೈಡ್‌ವಾಕ್ ಮೇಲೆ ನಡೆದು ಹೋಗುತ್ತಿದ್ದ ವೇಳೆ ತಮ್ಮ ಫೋನ್‌ನಲ್ಲಿ ’ಬಹಳ ಜೋರಾಗಿ’ ಮಾತನಾಡಿದ ಕಾರಣ ಪೊಲೀಸರು ತಮಗೆ $385 ದಂಡ ವಿಧಿಸಿದರು ಎಂದು ಅಮೆರಿಕದ ಮಿಷಗನ್‌ನ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಮತ್ತೊಂದು ದಿನ ಫೋನ್‌ನಲ್ಲಿ ಜೋರಾಗಿ ಮಾತನಾಡಬಾರದೆಂದು ಆಗ್ರಹಿಸಿ ತನ್ನ ಪಕ್ಕದ ಮನೆಯವರು ಇಲ್ಲಿನ ಚೂಸಿಂಗ್ ಸ್ಟ್ರೀಟ್ ಬಳಿ ಗದರಿದ್ದರು ಎಂದ ಡೈಮಂಡ್ ರಾಬಿನ್ಸನ್ ತಾವು ಜನಾಂಗೀಯ ದ್ವೇಷದ ಸಂತ್ರಸ್ತೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಪೋನಲ್ಲಿ ಜೋರಾಗಿ ಮಾತನಾಡುವ ಸಂಬಂಧ ಪಕ್ಕದ ಮನೆಯ ಶ್ವೇತವರ್ಣೀಯ ಮಹಿಳೆಯೊಂದಿಗೆ ವಾಗ್ವಾದ ನಡೆದ ಮೇಲೆ, ಪಕ್ಕದ ಮನೆಯಾಕೆ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಆ ದೂರಿನನ್ವಯ ಕ್ರಮ ತೆಗೆದುಕೊಂಡ ಪೊಲೀಸರು ಆಕೆಗೆ ’ಸಾರ್ವಜನಿಕ ಸ್ವಾಸ್ಥ್ಯ ಹಾಳು ಮಾಡುವ ವರ್ತನೆ’ ಆಪಾದನೆ ಮೇಲೆ $385ನಷ್ಟು ದಂಡ ವಿಧಿಸಿದ್ದಾರೆ.