alex Certify ಜಲಪಾತದಲ್ಲಿ ಆಡಲು ಹೋಗಿ ಕಣ್ಣೆದುರೇ ಕೊಚ್ಚಿಹೋದರು….! ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಪಾತದಲ್ಲಿ ಆಡಲು ಹೋಗಿ ಕಣ್ಣೆದುರೇ ಕೊಚ್ಚಿಹೋದರು….! ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ಫಿಲಿಪ್ಪೀನ್ಸ್​ನ ಜಲಪಾತದಲ್ಲಿ ಪ್ರವಾಸಿಗರು ಹಠಾತ್ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಭಯಾನಕ ಘಟನೆಯೊಂದರ ವಿಡಿಯೋ ವೈರಲ್​ ಆಗುತ್ತಿದೆ. ಕಳೆದ ವರ್ಷ ನಡೆದಿರುವ ಘಟನೆ ಇದಾಗಿದ್ದು, ಈಗ ಪುನಃ ಈ ವಿಡಿಯೋ ವೈರಲ್​ ಆಗುತ್ತಿದೆ.

ಉತ್ತರ ಸಿಬುವಿನ ಕ್ಯಾಟ್‌ಮನ್ ಪಟ್ಟಣದ ಟಿನುಬ್ಡಾನ್ ಜಲಪಾತದಲ್ಲಿ ಈ ಘಟನೆ ನಡೆದಿದೆ. ಹಠಾತ್ ರಭಸಕ್ಕೆ ಜಲಪಾತದಲ್ಲಿ ಕುಳಿತಿದ್ದ ಜನರು ಹೇಗೆ ಕೊಚ್ಚಿ ಹೋದರು ಎಂಬ ಭಯಾನಕ ವಿಡಿಯೋ ಇದಾಗಿದೆ.

ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ, ಜಲಪಾತದ ಬಳಿ ಜನರ ಗುಂಪೊಂದು ಖುಷಿಯಿಂದ ಕುಣಿದಾಡುವುದನ್ನು ನೋಡಬಹುದು. ಆದರೆ ಮುಂದಿನ ಕ್ಷಣದಲ್ಲಿ ಅವರಿಗಾಗಿ ಏನು ಕಾದಿದೆ ಎನ್ನುವ ಅರಿವೇ ಇಲ್ಲ. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಇದ್ದಕ್ಕಿದ್ದಂತೆ, ಒಳಬರುವ ನೀರಿನ ಹರಿವು ಹೆಚ್ಚಾಯಿತು.

ಎಲ್ಲರೂ ಭಯಭೀತರಾಗಿ ಸುರಕ್ಷಿತ ವಲಯಗಳಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕೆಲವರು ಕೊಚ್ಚಿ ಹೋಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ” ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ಗಳಿಗಿಂತ ನಿಮ್ಮ ಜೀವನವು ಹೆಚ್ಚು ಮುಖ್ಯವಾಗಿದೆ” ಎಂದು ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...